ಬ್ರುಸೆಲ್ಸ್: ಯುರೋಪಿಯನ್ ಆಯೋಗದ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್, ಗುರುವಾರ ಮಾಡರ್ನಾ ಮತ್ತು ಫಿಜರ್ನ ಎರಡೂ ಕೋವಿಡ್ ಲಸಿಕೆಗಳು ಡಿಸೆಂಬರ್ನಲ್ಲಿ ಷರತ್ತು ಬದ್ಧ ಮಾರುಕಟ್ಟೆ ಅಧಿಕಾರವನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ.
ಯುರೋಪಿಯನ್ ಒಕ್ಕೂಟದ ನಾಯಕರ ಸಭೆಯ ನಂತರ ಮಾತನಾಡಿದ ಯುರೋಪಿಯನ್ ಆಯೋಗದ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್, ಏನೂ ಸಮಸ್ಯೆಗಳಿಲ್ಲದೆ ಹೀಗೆ ಮುಂದುವರಿದರೆ, ಜರ್ಮನಿಯ ಔಷಧ ತಯಾರಕ ಬಯೋಟೆಕ್‌ನೊಂದಿಗೆ ಸೇರಿ ಕೋವಿಡ್ ವ್ಯಾಕ್ಸಿನ್ ಅನ್ನು ಅಭಿವೃದ್ಧಿಪಡಿಸಿರುವ ಮಾಡರ್ನಾ ಮತ್ತು ಫಿಜರ್ ಕಂಪನಿಗಳು ಅಭಿವೃದ್ಧಿಪಡಿಸಿದ ಲಸಿಕೆಗಳನ್ನು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (ಇಎಂಎ) ಈ ವರ್ಷದ ಅಂತ್ಯದ ವೇಳೆಗೆ ಅನುಮೋದಿಸಬಹುದು ಎಂದಿದ್ದಾರೆ.