ಕರ್ನಾಟಕ

karnataka

ETV Bharat / international

26 ರಾಷ್ಟ್ರಗಳ ಮೇಲೆ ಟ್ರಂಪ್ ಪ್ರಯಾಣ ನಿಷೇಧ: ಯುರೋಪಿಯನ್ ನಾಯಕರಿಂದ ತೀವ್ರ ವಿರೋಧ - ಕೋವಿಡ್ -19

ಕೊರೊನಾ ವೈರಸ್ ಹರಡಿರುವ ಹಿನ್ನೆಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 26 ಯುರೋಪಿಯನ್ ರಾಷ್ಟ್ರಗಳ ಮೇಲೆ ಪ್ರಯಾಣ ನಿಷೇಧ ಹೇರಿದ್ದಾರೆ. ಇದು ಆ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.

Trump travel ban
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

By

Published : Mar 13, 2020, 1:30 PM IST

ಲಂಡನ್: ಜಗತ್ತಿನಾದ್ಯಂತ ಕೊರೊನಾ ವೈರಸ್ ಹರಡಿರುವ ಹಿನ್ನೆಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 26 ಯುರೋಪಿಯನ್ ರಾಷ್ಟ್ರಗಳ ಮೇಲೆ ಪ್ರಯಾಣ ನಿಷೇಧ ಹೇರಿದ್ದು, ಇದು ಯುರೋಪಿಯನ್ ನಾಯಕರ ಕೋಪ ಮತ್ತು ಗೊಂದಲಕ್ಕೆ ಕಾರಣವಾಗಿದೆ. ಟ್ರಂಪ್ 'ಸಮಾಲೋಚನೆ ಇಲ್ಲದೆ' ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಯುರೋಪಿಯನ್ ನಾಯಕರು ಆರೋಪಿಸಿದ್ದಾರೆ.

"ಕೋವಿಡ್ -19’’ ಇದೊಂದು ಸಾಂಕ್ರಮಿಕ ರೋಗ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದೆ. ಈ ನಡುವೆ, ಟ್ರಂಪ್​​​ ಯುರೋಪಿಯನ್​ ರಾಷ್ಟ್ರಗಳ ಪ್ರಯಾಣ ನಿಷೇಧಿಸಿದ್ದಾರೆ. ಇದು ಏಕಪಕ್ಷೀಯ ಕ್ರಮ ಕೈಗೊಳ್ಳುವುದಕ್ಕಿಂತ ಸಹಕಾರದ ಅಗತ್ಯವಿದೆ" ಎಂದು ಯುರೋಪಿಯನ್​ ನಾಯಕರು ಹೇಳಿದ್ದಾರೆ.

ಅಮೆರಿಕದ ಸರಕುಗಳ ಮೇಲಿನ ತೆರಿಗೆಯನ್ನು ಹೆಚ್ಚಿಸುವಾಗ ಯುರೋಪಿಯನ್ ಯೂನಿಯನ್​​ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಇದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

ABOUT THE AUTHOR

...view details