ಕರ್ನಾಟಕ

karnataka

By

Published : Jan 27, 2022, 8:33 AM IST

ETV Bharat / international

ಸೆಕ್ಸಿಯೆಸ್ಟ್ ಅಂಚೆ ಮಹಿಳೆ.. ಈಕೆಯ ಕತೆ ಎಲ್ಲರಿಗೂ ಸ್ಫೂರ್ತಿ!

ನನ್ನ ಮಾರ್ಗವನ್ನು ನಾನೇ ಕಂಡುಕೊಳ್ಳದಿದ್ದರೆ, ಖಂಡಿತವಾಗಿಯೂ ಸಾಯುತ್ತಿದ್ದೆ ಎಂಬುದು ಲಿಯಾನ್ನೆ ವಿಲ್ಸನ್ ಹೇಳುವ ಮಾತು. ಇವರು ಈಗ ಬ್ರಿಟನ್​ನ ಸೆಕ್ಸಿಯೆಸ್ಟ್ ಅಂಚೆ ಮಹಿಳೆ ಎಂದೇ ಜನರಿಂದ ಕರೆಸಿಕೊಳ್ಳುತ್ತಾರೆ.

england sexiest postal worker lost  80 kg  by walking on the job
ಬ್ರಿಟನ್​ನ ಸೆಕ್ಸಿಯೆಸ್ಟ್ ಅಂಚೆ ಮಹಿಳೆ.. ಈಕೆಯ ಕತೆ ಎಲ್ಲರಿಗೂ ಸ್ಫೂರ್ತಿ

ತಿನ್ನುವ ಆಹಾರ ಚೆನ್ನಾಗಿರದಿದ್ದರೆ, ಆರೋಗ್ಯ ಖಂಡಿತವಾಗಿಯೂ ಹದಗೆಡುತ್ತದೆ. ಹಾಗಾಗಿ ದೇಹಾರೋಗ್ಯಕ್ಕೆ ಉತ್ತಮವಾದ ಆಹಾರ ಸೇವನೆ ಮಾಡುವುದು ಅತ್ಯಂತ ಮುಖ್ಯ. ನಾವು ತಿನ್ನುವ ಆಹಾರದಿಂದ ಆರೋಗ್ಯ ಹದೆಗೆಟ್ಟರೆ, ಆ ಆರೋಗ್ಯವನ್ನು ಸರಿ ಪಡಿಸಿಕೊಳ್ಳಲು ಏನೆಲ್ಲಾ ಶ್ರಮವಹಿಸಬೇಕಾಗುತ್ತದೆ ಎಂಬುದಕ್ಕೆ ಇಲ್ಲೊಬ್ಬರು ಸಾಕ್ಷ್ಯ ಒದಗಿಸಿದ್ದಾರೆ.

ಆಕೆಗೆ ಆಗ 18 ವರ್ಷ ವಯಸ್ಸು.. ಆಕೆಯ ಹೆಸರು ಲಿಯಾನ್ನೆ ವಿಲ್ಸನ್, ಆಕೆಯ ವೈದ್ಯರು ಆಕೆಗೊಂದು ಪತ್ರ ನೀಡುತ್ತಾರೆ. '21ನೇ ವರ್ಷದ ಹುಟ್ಟುಹಬ್ಬವನ್ನು ನೀವು ಆಚರಿಸಿಕೊಳ್ಳುವುದು ಸಂದೇಹ' ಎಂಬ ಎಚ್ಚರಿಕೆಯೊಂದಿಗೆ 'ಆಲ್ಕೋಹಾಲಿಕ್ ಅನಾನಿಮಸ್' ಎಂಬುವ ಅಂತಾರಾಷ್ಟ್ರೀಯ ಫೆಲೋಶಿಪ್​ಗೆ ಸೇರಿಕೊಳ್ಳುವಂತೆ ಸಲಹೆ ನೀಡಿದ ಪತ್ರ ಅದು. ಆದರೆ ಆಕೆ ಮದ್ಯವ್ಯಸನಿಯೇನೂ ಆಗಿರಲಿಲ್ಲ.. ಆದರೆ ತಿನ್ನುವ ಗೀಳು ಹೆಚ್ಚಾಗಿತ್ತು.

ಬ್ರಿಟನ್​ನ ಸೆಕ್ಸಿಯೆಸ್ಟ್ ಅಂಚೆ ಮಹಿಳೆಯಾದ ಲಿಯಾನ್ನೆ ವಿಲ್ಸನ್​

ಅಂದಹಾಗೆ ಆಲ್ಕೋಹಾಲಿಕ್ ಅನಾನಿಮಸ್ ಎಂಬ ಫೆಲೋಶಿಪ್ ಯಾವುದೇ ಶುಲ್ಕ ಇಲ್ಲದೇ, ಮದ್ಯವ್ಯಸನಿಗಳಿಗೆ ಸಲಹೆ, ಚಿಕಿತ್ಸೆ ನೀಡಿ, ಅವರನ್ನು ಆರೋಗ್ಯವಂತರನ್ನಾಗಿ ಮಾಡುತ್ತದೆ ಮತ್ತು ಮದ್ಯಪಾನ ಸೇವನೆಯ ದುಷ್ಪರಿಣಾಮಗಳಿಂದ ಜನರನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಲಿಯಾನ್ನೆ ವಿಲ್ಸನ್ ಅಂಚೆ ಮಹಿಳೆಯೆಂದರೆ ಎಲ್ಲರಿಗೂ ಆಶ್ಚರ್ಯವಾಗುತ್ತದೆಯಂತೆ

ತಿನ್ನುವ ಗೀಳಿನಿಂದ ಆಕೆಯ ದೇಹದ ತೂಕ 336 ಪೌಂಡ್ ಅಂದರೆ 152 ಕೆಜಿಗೆ ಹೆಚ್ಚಾಯ್ತು.. ಕೇವಲ 24ನೇ ವಯಸ್ಸಿಗೆ ಬಲೂನಿನಂತಾದ ಆಕೆಗೆ ಟೈಪ್ 2 ಡಯಾಬಿಟೀಸ್ ಕೂಡಾ ಇತ್ತು. ಉಸಿರಾಡಲೂ ತೊಂದರೆ ಅನುಭವಿಸುತ್ತಿದ್ದಳು. ಆಸ್ಪತ್ರೆಗೆ ದಾಖಲಾದಾಗ ಗೊತ್ತಾಗಿದ್ದು, ಆಕೆಯ ಲಿವರ್ ಫೇಲ್​ ಆಗಿದೆ ಎಂದು. ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಿರುವುದರಿಂದ ಮತ್ತು ತಿನ್ನುವ ಗೀಳಿನಿಂದಾಗಿ ಆಕೆ ಈ ಪರಿಸ್ಥಿತಿಯನ್ನು ಆಕೆ ಅನುಭವಿಸಬೇಕಾಗಿ ಬಂತು.

ಮದ್ಯಸೇವನೆಯಿಂದ ಇಷ್ಟೊಂದು ದೊಡ್ಡ ಮಟ್ಟದ ಹಾನಿಯಾಗಿರುವುದು ನಾನು ಈವರೆಗೂ ಕಂಡಿರಲಿಲ್ಲ ಎಂದು ಹೇಳಿ ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದರು. ನಾನು ಹೆಚ್ಚಾಗಿ ಮದ್ಯಸೇವನೆ ಮಾಡುವುದಿಲ್ಲ ಎಂದು ಲಿಯಾನ್ನೆ ವಿಲ್ಸನ್ ಹೇಳಿದರೂ, ವೈದ್ಯರು ನಂಬುವ ಸ್ಥಿತಿಯಲ್ಲಿ ಇರಲಿಲ್ಲ.

ನನ್ನ ಮಾರ್ಗ ನಾನು ಕಂಡುಕೊಳ್ಳದಿದ್ದರೆ, ಸಾಯುತ್ತಿದ್ದೆ ಎನ್ನುತ್ತಾರೆ ಲಿಯಾನ್ನೆ ವಿಲ್ಸನ್​​

ಲಿಯಾನ್ನೆ ಈಗ ಇಂಗ್ಲೆಂಡ್​ನ ಸೆಕ್ಸಿಯೆಸ್ಟ್ ಮಹಿಳೆ:ವೈದ್ಯರೇ ಈ ರೀತಿ ಹೇಳಿದ ನಂತರ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂಬ ಹಠಕ್ಕೆ ಬಿದ್ದ ಲಿಯಾನ್ನೆ ವಿಲ್ಸನ್, ತನ್ನ ಜೀವನದಲ್ಲಿ ತುರ್ತು ಮತ್ತು ಅಮೂಲಾಗ್ರ ಬದಲಾವಣೆ ಮಾಡಿಕೊಳ್ಳಬೇಕೆಂದು ತನ್ನ ಪ್ರಯತ್ನ ಆರಂಭಿಸಿದರು.

ಈಗ ಆಕೆಗೆ 37 ವರ್ಷ. ಇಂಗ್ಲೆಂಡ್​ನ ಸೆಕ್ಸಿಯೆಸ್ಟ್ ಮಹಿಳೆಯರಲ್ಲಿ ಒಬ್ಬರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮಟ್ಟಿಗೆ ಬದಲಾಗಿದ್ದಾರೆ. 20 ವರ್ಷದ ಹುಟ್ಟುಹಬ್ಬದ ಸಂದೇಹ ವ್ಯಕ್ತಪಡಿಸಿದ್ದವರು ಈಗ ಅಚ್ಚರಿಗೊಳಗಾಗಿದ್ದಾರೆ. 152 ಕೆಜಿ ಇದ್ದ ಆಕೆಯ ದೇಹದ ತೂಕ ಈಗ ಕೇವಲ 82 ಕೆಜಿ.

ಹೆಚ್ಚು ಮದ್ಯಸೇವನೆ ಮಾಡುವುದಿಲ್ಲ ಎಂದು ಹೇಳಿದರೂ ವೈದ್ಯರು ನಂಬುತ್ತಿರಲಿಲ್ಲ ಎಂದು ಲಿಯಾನ್ನೆ ಹೇಳುತ್ತಾರೆ

ಲಿಯಾನ್ನೆ ವಿಲ್ಸನ್ ಮಾಡಿದ್ದೇನು?:ತನ್ನ ತೂಕವನ್ನು ಇಳಿಸಿಕೊಳ್ಳಲು ಆಕೆ ಜಿಮ್ ಅಥವಾ ಮತ್ಯಾವುದೋ ಫಿಟ್ನೆಸ್ ಸೆಂಟರ್​ಗೆ ಸೇರಿಕೊಂಡಿರಲಿಲ್ಲ. ಆಕೆಯೇ ಹೇಳುವಂತೆ ಆಕೆಗೆ ಜಿಮ್​ನಲ್ಲಿ ವರ್ಕೌಟ್ ಮಾಡುವುದು ಇಷ್ಟವಿಲ್ಲ. ಹಾಗಾಗಿ ತೂಕ ಇಳಿಸಿಕೊಳ್ಳಲು ಹೆಚ್ಚು ಸಂಬಳ ಬರುತ್ತಿದ್ದ ಕೆಲಸವನ್ನು ಬಿಟ್ಟು, 2018ರಲ್ಲಿ ಈಗ ಪೋಸ್ಟ್ ವುಮೆನ್ ಆಗಿ ಕೆಲಸಕ್ಕೆ ಸೇರಿಕೊಂಡರು.

ಕೇವಲ ಎರಡು ವರ್ಷದ ನಂತರ ಆಕೆಯಲ್ಲಿ ಅಭೂತಪೂರ್ವ ಬದಲಾವಣೆಯಯಾಗಿದೆ. ಇಂಗ್ಲೆಂಡ್​ನ ಪೋಸ್ಟಲ್ ಕಂಪನಿಯೊಂದರಲ್ಲಿ ಕೆಲಸ ಮಾಡುವ ಆಕೆ 'ದಿನಕ್ಕೆ ಒಂಬತ್ತು ಮೈಲು ನಡೆಯುತ್ತೇನೆ. ಜನರೊಂದಿಗೆ ಮುಕ್ತವಾಗಿ ಮಾತನಾಡುತ್ತೇನೆ. ನನ್ನ ಮೇಲೆ ಯಾವುದೇ ಒತ್ತಡವಿಲ್ಲ. ನನ್ನ ಮೇಲೆ ನಾನು ಗಮನ ಕೇಂದ್ರೀಕರಿಸಲು ಸಾಧ್ಯವಾಗಿದೆ' ಎನ್ನುತ್ತಾರೆ. ಇದರಿಂದ ಜನರು ಆಕೆಯನ್ನ ಬ್ರಿಟನ್​ನ ಸೆಕ್ಸಿಯಸ್ಟ್ ಪೋಸ್ಟ್ ವುಮೆನ್ ಎಂದು ಕರೆಯುತ್ತಾರೆ.

ಲಿಯಾನ್ನೆ ವಿಲ್ಸನ್ ಕೆಲವೇ ವರ್ಷ ಬದುಕುವುದಾಗಿ ಹೇಳಿದ್ದ ವೈದ್ಯರು

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ನಾನು ಅಂಚೆ ಪತ್ರಗಳನ್ನು ಹಂಚಲು ತೆರಳಿದಾಗ ಜನರು ನನ್ನನ್ನು ನೋಡಿ ಆಶ್ಚರ್ಯ ಪಡುತ್ತಾರೆ. ನೀನು ನಿಜವಾಗಿಯೂ ಪೋಸ್ಟ್ ಹಂಚುವ ಮಹಿಳೆಯಾ ಎಂದು ಕೇಳುತ್ತಾರೆ. ನಾನು ಹೌದು ಎಂದು ಹೇಳಿದರೂ, ಜನರು ನಂಬುವುದಿಲ್ಲ. ಅವರು ನನ್ನನ್ನು ಅಭಿನಂದಿಸುತ್ತಾರೆ. ನನಗೆ ಖುಷಿಯಾಗುತ್ತದೆ ಎಂದು ಲಿಯಾನ್ನೆ ಹೇಳಿದ್ದಾರೆ.

ನಾನು ಸಾಯುತ್ತಿದ್ದೆ: ಹದಿಹರೆಯದಲ್ಲಿದ್ದಾಗ ಯಾವಾಗಲೂ ಹೋಟೆಲ್ ಅಥವಾ ರೆಸ್ಟೋರೆಂಟ್ ಪದಾರ್ಥಗಳನ್ನು ಹೆಚ್ಚಾಗಿ ತಿನ್ನುತ್ತಿದ್ದೆ. ಅಲ್ಲಿ ಶುಚಿಯಾಗಿ ಕೆಟ್ಟ ಆಹಾರವನ್ನು ನೀಡುತ್ತಾರೆ. ನನ್ನ ಮಾರ್ಗವನ್ನು ನಾನೇ ಕಂಡುಕೊಳ್ಳದಿದ್ದರೆ, ಖಂಡಿತವಾಗಿಯೂ ಸಾಯುತ್ತಿದ್ದೆ ಎಂಬುದು ಲಿಯಾನ್ನೆ ವಿಲ್ಸನ್ ಹೇಳುವ ಮಾತು.

ಲಿಯಾನ್ನೆ ವಿಲ್ಸನ್​​

ಇದರಿಂದ ಆಕೆ ಸಂತೋಷವಾಗಿದ್ದು, ಈ ಮೊದಲು ಸರ್ಕಾರಿ ಕೆಲಸದಲ್ಲಿದ್ದಾಗ, ಗಳಿಸುತ್ತಿದ್ದ ಹಣಕ್ಕಿಂತ ಕಡಿಮೆ ಹಣವನ್ನು ಈಗಿನ ಕೆಲಸದಲ್ಲಿ ಗಳಿಸುತ್ತೇನೆ. ಆದರೆ.. ಅಲ್ಲಿ ಸಂತೋಷವಿರಲಿಲ್ಲ. ಆದರೆ ಇಲ್ಲಿ ಸಂತೋಷವಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಇದನ್ನೂ ಓದಿ:ವೃದ್ಧರಲ್ಲಿ ಟೈಪ್-2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತೆ ವಾಕಿಂಗ್..

ABOUT THE AUTHOR

...view details