ಕೀವ್(ಉಕ್ರೇನ್):ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡಿದ್ದು, ಕಳೆದ ಮೂರು ದಿನಗಳಿಂದ ಉಭಯ ದೇಶಗಳ ನೂರಾರು ಜನರು, ಯೋಧರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಮಧ್ಯೆ ಉಕ್ರೇನ್ ಯೋಧರು ದೇಶ ರಕ್ಷಣೆಯಲ್ಲಿ ಮಗ್ನರಾಗಿದ್ದಾರೆ. ದೇಶ ರಕ್ಷಣೆಗಾಗಿ ತಮ್ಮ ಜೀವ ಮುಡಿಪಾಗಿಟ್ಟಿದ್ದಾರೆ.
ಉಕ್ರೇನ್ ರಾಜಧಾನಿ ಕೀವ್ನ ಫೋಟೋಬ್ರೀಡ್ಜ್ನಲ್ಲಿ ಏಕಾಂಗಿಯಾಗಿ ಗಡಿ ರಕ್ಷಣೆ ಮಾಡುತ್ತಿರುವ 21 ವರ್ಷದ ಯೋಧ ಇದೀಗ ತನ್ನ ಪೋಷಕರ ನೆನಪು ಮಾಡಿಕೊಂಡು ಕಣ್ಣೀರು ಹಾಕಿದ್ದಾನೆ. ಯೋಧನ ಪೋಷಕರು ವಾಸವಾಗಿರುವ ಸ್ಥಳದಲ್ಲಿ ಈಗಾಗಲೇ ರಷ್ಯಾ ಯೋಧರು ದಾಳಿ ನಡೆಸಿದ್ದು, ಇದರ ಮಾಹಿತಿ ಲಭ್ಯವಾಗುತ್ತಿದ್ದಂತೆ ಗಡಿ ಕಾಯುತ್ತಿರುವ ಯೋಧ ತಮ್ಮ ಪೋಷಕರನ್ನ ನೆನೆದು ಗದ್ಗದಿತರಾಗಿದ್ದಾನೆ.