ಪ್ಯಾರಿಸ್: ಕೊರೊನಾ ವೈರಸ್ ಹಿಮ್ಮೆಟ್ಟಿಸಲು ಶತಪ್ರಯತ್ನ ಮಾಡುತ್ತಿರುವ ಫ್ರಾನ್ಸ್ ತನ್ನ ದೇಶದ ಆರೋಗ್ಯ ಸಿಬ್ಬಂದಿಗೆ ಮನಃಪೂರ್ವಕ ಧನ್ಯವಾದಗಳನ್ನು ತಿಳಿಸಿದೆ. ಐತಿಹಾಸಿಕ ಐಫೆಲ್ ಟವರ್ ಮೂಲಕ ಫ್ರಾನ್ಸ್ನ ಸಮಸ್ತ ಜನತೆಯ ಪರವಾಗಿ ವೈದ್ಯಕೀಯ ಸಿಬ್ಬಂದಿಯ ಕಾರ್ಯಕ್ಕೆ ಕೃತಜ್ಱತೆಗಳನ್ನು ಸಲ್ಲಿಸಲಾಯಿತು.
ಶುಕ್ರವಾರ ರಾತ್ರಿ ಐಫೆಲ್ ಟವರ್ ಮೇಲೆ ಜಗಮಗಿಸುವ ವಿದ್ಯುದ್ದೀಪಗಳ ಅಲಂಕಾರದಲ್ಲಿ 'ಥ್ಯಾಂಕ್ ಯೂ' 'ಮನೆಯಲ್ಲೇ ಇರಿ' ಎಂಬ ಸಂದೇಶಗಳು ಮೂಡಿ ಬಂದವು. ಸ್ಥಳೀಯ ಕಾಲಮಾನ ರಾತ್ರಿ 8 ಗಂಟೆಯಷ್ಟೊತ್ತಿಗೆ ಲಾಕ್ಡೌನ್ನಲ್ಲಿರುವ ಇಡೀ ಫ್ರಾನ್ಸ್ ಜನತೆ ತಮ್ಮ ಮನೆಗಳ ಮುಂದೆ, ಬಾಲ್ಕನಿಗಳಲ್ಲಿ ನಿಂತು ವೈದ್ಯಕೀಯ ಹಾಗೂ ಶುಶ್ರೂಷಕ ಸಿಬ್ಬಂದಿಯ ಸೇವೆಗೆ ಧನ್ಯವಾದಗಳನ್ನ ಅರ್ಪಿಸಿದರು. ಸರಿಯಾಗಿ ಇದೇ ಸಮಯದಲ್ಲಿ ಐಫೆಲ್ ಟವರ್ ಮೂಲಕ ಥ್ಯಾಂಕ್ ಯೂ ಸಂದೇಶ ಸಾರಲಾಯಿತು.