ಕರ್ನಾಟಕ

karnataka

ETV Bharat / international

G20 Meeting: ಕೆನಡಾದ ವಿದೇಶಾಂಗ ಸಚಿವರೊಂದಿಗೆ ಜೈಶಂಕರ್ ಮಾತುಕತೆ

ಪ್ರಸ್ತುತ, ಜೈಶಂಕರ್ ಇಟಲಿಯಲ್ಲಿ ನಡೆಯುತ್ತಿರುವ ಜಿ-20ಯ ಸಚಿವರ ಸಭೆಯಲ್ಲಿ ಭಾಗವಹಿಸಿದ್ದು, ಈ ಸಭೆಯಲ್ಲಿ ಬ್ರಿಟನ್, ಜಪಾನ್​, ಕೆನಡಾ, ಸೌದಿ ಅರೇಬಿಯಾ, ಇಟಲಿ, ಮೆಕ್ಸಿಕೋ, ಮತ್ತು ಯೂರೋಪಿಯನ್ ಯೂನಿಯನ್​ನ ಪ್ರತಿನಿಧಿಯೊಂದಿಗೆ ಸಭೆ ನಡೆಸಿದ್ದಾರೆ.

EAM Jaishankar, Canadian FM discuss Indo-Pacific, trade & economic cooperation
ಕೆನಡಾದ ವಿದೇಶಾಂಗ ಸಚಿವರೊಂದಿಗೆ ಜೈಶಂಕರ್ ಮಾತುಕತೆ

By

Published : Jun 30, 2021, 4:13 AM IST

Updated : Jun 30, 2021, 5:02 AM IST

ಮಟೇರಾ, ಇಟಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಕೆನಡಾದ ವಿದೇಶಾಂಗ ಸಚಿವ ಮಾರ್ಕ್ ಗಾರ್ನಿಯೊ ಅವರನ್ನು ಮಂಗಳವಾರ ಭೇಟಿಯಾಗಿ ವ್ಯಾಪಾರ ಮತ್ತು ಆರ್ಥಿಕ ಸಹಕಾರ ಸೇರಿದಂತೆ ಕೆಲವೊಂದು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಈ ಕುರಿತು ಜೈಶಂಕರ್ ಟ್ವೀಟ್ ಮಾಡಿದ್ದು, ಇಂಡೋ-ಪೆಸಿಫಿಕ್, ವ್ಯಾಪಾರ ಮತ್ತು ಆರ್ಥಿಕ ಸಹಕಾರ ಮತ್ತು ದ್ವಿಪಕ್ಷೀಯ ಸಹಕಾರ ಕುರಿತು ಕೆನಡಾದ ವಿದೇಶಾಂಗ ಸಚಿವ ಮಾರ್ಕ್ ಗಾರ್ನಿಯೊ ಅವರೊಂದಿಗೆ ಉಪಯುಕ್ತ ಮಾತುಕತೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಸ್ತುತ, ಜೈಶಂಕರ್ ಇಟಲಿಯಲ್ಲಿ ನಡೆಯುತ್ತಿರುವ ಜಿ-20ಯ ಸಚಿವರ ಸಭೆಯಲ್ಲಿ ಭಾಗವಹಿಸಿದ್ದು, ಈ ಸಭೆಯಲ್ಲಿ ಬ್ರಿಟನ್, ಜಪಾನ್​, ಕೆನಡಾ, ಸೌದಿ ಅರೇಬಿಯಾ, ಇಟಲಿ, ಮೆಕ್ಸಿಕೋ, ಮತ್ತು ಯೂರೋಪಿಯನ್ ಯೂನಿಯನ್​ನ ಪ್ರತಿನಿಧಿಯೊಂದಿಗೆ ಸಭೆ ನಡೆಸಿದ್ದಾರೆ.

ಜಿ-20ಯ ಸಚಿವರ ಸಭೆಯಲ್ಲಿ ಮಾತನಾಡಿರುವ ಜೈಶಂಕರ್ ಕೋವಿಡ್​ಗೆ ಅಂತಾರಾಷ್ಟ್ರೀಯ ಸಹಕಾರ ಅತ್ಯಂತ ಮುಖ್ಯ ಎಂದಿದ್ದಾರೆ. ಜಾಗತೀಕರಣದ ವಿಕೇಂದ್ರೀಕರಣ ಉತ್ತಮವಾದ ಆರ್ಥಿಕತೆಗೆ ಅವಶ್ಯಕತೆಯಿದೆ ಎಂದಿದ್ದಾರೆ.

ಇದನ್ನೂ ಓದಿ:CD Case: ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ರಜೆ.. ಆಮೆ ವೇಗದಲ್ಲಿ ತನಿಖೆ

ಜಿ-20 ಸಂಘಟನೆಯಲ್ಲಿ ಭಾರತ ಸೇರಿದಂತೆ 19 ರಾಷ್ಟ್ರಗಳು, ಯೂರೋಪಿಯನ್ ಯೂನಿಯನ್ ಒಕ್ಕೂಟವಿದೆ.ಈ ಬಾರಿಯ ಜಿ-20 ಸಂಘಟನೆಯ ಶೃಂಗಸಭೆಯ ನೇತೃತ್ವವನ್ನು ಇಟಲಿ ವಹಿಸಿಕೊಂಡಿದೆ.

Last Updated : Jun 30, 2021, 5:02 AM IST

ABOUT THE AUTHOR

...view details