ಕರ್ನಾಟಕ

karnataka

ETV Bharat / international

ಕೊರೊನಾ ಸೋಂಕಿಗೆ ಒಳಗಾಗಿದ್ದ ಇಂಗ್ಲೆಂಡ್​ ರಾಜಕುಮಾರ್​​ ವಿಲಿಯಂ - ಏಪ್ರಿಲ್​ನಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದ ಕೇಂಬ್ರಿಡ್ಜ್ ರಾಜಕುಮಾರ ವಿಲಿಯಂ

ಕೇಂಬ್ರಿಡ್ಜ್ ರಾಜಕುಮಾರ ವಿಲಿಯಂ ಏಪ್ರಿಲ್​ನಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದರೆಂದು ಬ್ರಿಟಿಷ್ ಮಾಧ್ಯಮಗಳು ವರದಿ ಮಾಡಿವೆ. ವಿಲಿಯಂ ಅವರಿಗೆ ಅರಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ವೈದ್ಯರು ಚಿಕಿತ್ಸೆ ನೀಡಿದ್ದರು ಎಂಬ ಅಂಶ ಇದೀಗ ಬಯಲಾಗಿದೆ.

ಕೇಂಬ್ರಿಡ್ಜ್ ರಾಜಕುಮಾರ ವಿಲಿಯಂ ಗೆ ಕೊರೊನಾ ಪಾಸಿಟಿವ್
ಕೇಂಬ್ರಿಡ್ಜ್ ರಾಜಕುಮಾರ ವಿಲಿಯಂ ಗೆ ಕೊರೊನಾ ಪಾಸಿಟಿವ್

By

Published : Nov 2, 2020, 10:40 AM IST

ಲಂಡನ್: ಗ್ರೇಟ್​ ಬ್ರಿಟನ್​​​ ರಾಜಕುಮಾರ ವಿಲಿಯಂ ಏಪ್ರಿಲ್​ನಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದರು ಎಂದು ಬ್ರಿಟಿಷ್ ಮಾಧ್ಯಮವೊಂದು ಭಾನುವಾರ ವರದಿ ಮಾಡಿದೆ.

ರಾಜಕುಮಾರ ವಿಲಿಯಂ ಅವರ ಮನೆಯವರು ಮತ್ತು ಕಚೇರಿ ಸಿಬ್ಬಂದಿ ಈ ಕುರಿತು ಮಾಹಿತಿ ನೀಡಲು ನಿರಾಕರಿಸಿದ್ದಾರೆ. ವಿಲಿಯಂ ಅವರಿಗೆ ಅರಮನೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ವೈದ್ಯರು ಚಿಕಿತ್ಸೆ ನೀಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಅವರ ಕುಟುಂಬವನ್ನು ನಾರ್ಫೋಕ್‌ನ ಅನ್ಮರ್ ಹಾಲ್‌ನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು ಎಂದು ತಿಳಿದು ಬಂದಿದೆ.

ಇಂಗ್ಲೆಂಡ್​ನಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ನಡುವೆ ಇಂಗ್ಲೆಂಡ್​ನಲ್ಲಿ ಎರಡನೇ ಅವಧಿಯ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ.

ABOUT THE AUTHOR

...view details