ಕರ್ನಾಟಕ

karnataka

ETV Bharat / international

ದೂರದ ಐಸ್​ಲ್ಯಾಂಡ್​ಗಳಿಗೆ ಡ್ರೋನ್​ ಮೂಲಕ ವೈದ್ಯಕೀಯ ಸಾಮಗ್ರಿ ಪೂರೈಕೆ..! ವಿಡಿಯೋ - ಐಸ್​ಲ್ಯಾಂಡ್​ಗಳಿಗೆ ಡ್ರೋನ್​ ಮೂಲಕ ವೈದ್ಯಕೀಯ ಸಾಮಾಗ್ರಿ ಪೂರೈಕೆ

ವೆಚ್ಚ ಮತ್ತು ವಿತರಣಾ ಸಮಯವನ್ನು ಕಡಿತಗೊಳಿಸುವ ಉದ್ದೇಶದಿಂದ ಸ್ಕಾಟ್​ಲ್ಯಾಂಡ್​ನಲ್ಲಿ ವೈದ್ಯಕೀಯ ಸಾಮಗ್ರಿಗಳನ್ನು ತಲುಪಿಸಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ.

Drones deliver medical supplies
ಐಸ್​ಲ್ಯಾಂಡ್​ಗಳಿಗೆ ಡ್ರೋನ್​ ಮೂಲಕ ವೈದ್ಯಕೀಯ ಸಾಮಾಗ್ರಿ ಪೂರೈಕೆ

By

Published : May 29, 2020, 8:41 PM IST

ಓಬನ್(ಸ್ಕಾಟ್​ಲ್ಯಾಂಡ್):ಸ್ಕಾಟ್‌ಲ್ಯಾಂಡ್‌ನ ಪಶ್ಚಿಮ ಕರಾವಳಿಯ ದ್ವೀಪವೊಂದಕ್ಕೆ ಹೆಚ್ಚು ಅಗತ್ಯವಿರುವ ವೈದ್ಯಕೀಯ ಸಾಮಗ್ರಿಗಳನ್ನು ತಲುಪಿಸಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ.

ವೆಚ್ಚ ಮತ್ತು ವಿತರಣಾ ಸಮಯವನ್ನು ಕಡಿತಗೊಳಿಸುವ ಉದ್ದೇಶದಿಂದ ಇಂತಹ ಪ್ರತಯ್ನಕ್ಕೆ ಕೈಹಾಕಲಾಗಿದೆ. ವಿಶೇಷವಾಗಿ ಕೊರೊನಾ ವೈರಸ್​ನಂತ ವೈದ್ಯಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಡ್ರೋನ್​ಗಳು ಹೆಚ್ಚು ನೆರವಾಗಲಿವೆ ಎನ್ನಲಾಗಿದೆ.

ಐಸ್​ಲ್ಯಾಂಡ್​ಗಳಿಗೆ ಡ್ರೋನ್​ ಮೂಲಕ ವೈದ್ಯಕೀಯ ಸಾಮಗ್ರಿ ಪೂರೈಕೆ

ಹಲವಾರು ಕಿಲೋ ಗ್ರಾಂ ವೈದ್ಯಕೀಯ ಸಾಮಗ್ರಿಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿರುವ ಡ್ರೋನ್ ಬುಧವಾರ ತನ್ನ ಮೊದಲ ಹಾರಾಟವನ್ನು ಸ್ಕಾಟ್ಲೆಂಡ್‌ನ ಓಬನ್‌ನಿಂದ 16 ಕಿಲೋ ಮೀಟರ್ ದೂರದಲ್ಲಿರುವ ಐಸ್ಲೆ ಆಫ್ ಮುಲ್‌ಗೆ ತಲುಪಿತು. ಸ್ಥಳೀಯ ಕೌನ್ಸಿಲ್ ಪ್ರಕಾರ, 23 ಜನವಸತಿ ದ್ವೀಪಗಳನ್ನು ಒಳಗೊಂಡಿರುವ ಆರ್ಜಿಲ್ ಮತ್ತು ಬ್ಯುಟೆ ಪ್ರದೇಶದ ದ್ವೀಪಗಳಿಗೆ ವೈದ್ಯಕೀಯ ಅಗತ್ಯಗಳನ್ನು ವೇಗವಾಗಿ ಮತ್ತು ಕಡಿಮೆ ಖರ್ಚಿನಲ್ಲಿ ಪೂರೈಸುವ ಗುರಿ ಹೊಂದಿದೆ.

ಕೋವಿಡ್-19 ಟೆಸ್ಟ್ ಕಿಟ್‌ಗಳು, ಪಿಪಿಇ ಕಿಟ್​ಗ​ಳಂತ ತುರ್ತು ವೈದ್ಯಕೀಯ ಸರಕುಗಳನ್ನು ಡ್ರೋನ್ ಮೂಲಕ ತಲುಪಿಸುವುದು ಎಷ್ಟರ ಮಟ್ಟಿಗೆ ಸಾಧ್ಯ ಎಂದು ಪರೀಕ್ಷಿಸುವ ಗುರಿ ಇದೆ. 5 ಕೆ.ಜಿ ಗಳಷ್ಟು ತೂಕದ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಬಲ್ಲದು. ಇದು ಗಂಟೆಗೆ 100 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರ ಹಾರಬಲ್ಲದು, ಆದ್ದರಿಂದ ನಮಗೆ ಹೆಚ್ಚು ನೆರವಾಗಲಿದೆ ಎಂದು ಡ್ರೋಣ್ ತಯಾರಿಕಾ ಸಂಸ್ಥೆ ಸ್ಕೈಪೋರ್ಟ್ಸ್ ಸಿಇಒ ಡಂಕನ್ ವಾಕರ್ ಹೇಳಿದ್ದಾರೆ.

ABOUT THE AUTHOR

...view details