ಕೀವ್( ಉಕ್ರೇನ್): ಇತ್ತೀಚೆಗೆ ನಡೆದ ಘಟನೆಯಲ್ಲಿ ರಷ್ಯಾ ಸೈನಿಕರು ಅಮಾಯಕರ ಮೇಲೆ ದಾಳಿ ಮಾಡಿರುವ ವಿಡಿಯೋ ಎಲ್ಲೆಡೆ ಸದ್ದು ಮಾಡುತ್ತಿದೆ. ಶರಣಾಗತಿಯಾಗಲು ಬಂದ ಕಾರಿನ ಚಾಲಕನ ಮೇಲೆ ರಷ್ಯಾ ಸೈನಿಕರು ಗುಂಡಿನ ದಾಳಿ ನಡೆಸಿರುವ ವಿಡಿಯೋ ಈಗ ಸಂಚಲನ ಸೃಷ್ಟಿಸಿದೆ.
ರಾಜಧಾನಿ ಕೀವ್‌ನ ಹೃದಯಭಾಗಕ್ಕೆ ಹೋಗುವ ಹೆದ್ದಾರಿ ಅಂಚಿನಲ್ಲಿ ಯುದ್ಧ ಟ್ಯಾಂಕರ್ವೊಂದು ನಿಂತಿದೆ. ಸಿಲ್ವರ್ ಬಣ್ಣದ ಕಾರೊಂದು ಕೀವ್‌ನ ಹೃದಯ ಭಾಗಕ್ಕೆ ತೆರಳುತ್ತಿತ್ತು. ಈ ವೇಳೆ ಯುದ್ಧದ ಟ್ಯಾಂಕರ್ ನೋಡಿದ ಚಾಲಕ ಯೂ-ಟರ್ನ್ ಹೊಡೆದು ವಾಪಸ್ಸಾಗಲು ನಿರ್ಧರಿಸಿದ್ದಾನೆ.
ಓದಿ:ಬಲವಂತದ ಬಂದ್ ಆಚರಣೆ ಸರಿಯಲ್ಲ - ರಸ್ತೆಗಿಳಿದರೆ ಕಾನೂನು ಕ್ರಮ: ಕಮಲ್ ಪಂತ್ ಎಚ್ಚರಿಕೆ!
ವಾಪಸ್ಸಾಗುತ್ತಿದ್ದ ಕಾರನ್ನು ರಷ್ಯಾ ಸೈನಿಕರು ಅಡ್ಡಗಟ್ಟಿದ್ದಾರೆ. ಈ ವೇಳೆ, ಚಾಲಕ ಕಾರಿನಿಂದ ಹೊರ ಬಂದು ಶರಣಾಗಲು ಕೈಗಳನ್ನು ಮೇಲಕ್ಕೇತ್ತಿದ್ದಾನೆ. ಅಷ್ಟರಲ್ಲಿ ಆ ಚಾಲಕ ಮೇಲೆ ರಷ್ಯಾ ಸೈನಿಕರು ಗುಂಡು ಹಾರಿಸಿ ಕೊಂದಿದ್ದಾರೆ.
ಇನ್ನು ಆ ಕಾರಿನಲ್ಲಿ ಮಗುವಿನೊಂದಿಗೆ ಮಹಿಳೆ ಸಹ ಪ್ರಯಾಣಿಸುತ್ತಿದ್ದರು. ಅವರನ್ನು ವಶಕ್ಕೆ ಪಡೆದ ರಷ್ಯಾ ಸೈನಿಕರು ಕಾಡಿನ ಕಡೆ ಕರೆದುಕೊಂಡು ಹೋದರು ಎಂಬುದು ಜರ್ಮನ್ ಬ್ರಾಡ್‌ಕಾಸ್ಟರ್ ZDF ವರದಿಗಾರರೊಬ್ಬರ ಡ್ರೋನ್ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.
ಈ ವಿಡಿಯೋ ತುಣಕನ್ನು ಬುಗಾಟ್ಟಿ ಕಂಪನಿಯ ಸ್ವಯಂಸೇವಕ ಗುಂಪಿನ ಸದಸ್ಯರಾದ ಡ್ರೋನ್ ಆಪರೇಟರ್ ಝನೋಜಾ ಪಡೆದು ಘಟನೆಯ ಬಗ್ಗೆ ಬಯಲಿಗೆಳಿದಿದ್ದಾರೆ. ಯುದ್ಧಾಪರಾಧಗಳ ಗಂಭೀರ ಆರೋಪಗಳ ಹೊರತಾಗಿಯೂ ರಷ್ಯಾ ತನ್ನ "ವಿಶೇಷ ಸೇನಾ ಕಾರ್ಯಾಚರಣೆ" ಸೈನಿಕರ ಮೇಲೆಯೇ ಹೊರತು ನಾಗರಿಕರ ಮೇಲಲ್ಲ ಎಂದು ಸ್ಪಷ್ಟಪಡಿಸುತ್ತಲೇ ಇದೆ. ಆದರೆ ಪರಿಸ್ಥಿತಿ ಮಾತ್ರ ಬೇರೆಯೇ ಇದೆ ಎಂಬುದು ಡ್ರೋಣ್ ವಿಡಿಯೋಗಳು ಹೇಳುತ್ತಿವೆ.