ಕರ್ನಾಟಕ

karnataka

By

Published : Jun 26, 2020, 8:25 AM IST

ETV Bharat / international

ಶೋರೂಂನಿಂದ​ ಪಡೆದ 20 ನಿಮಿಷದಲ್ಲೇ ಅಪಘಾತ: ಕಣ್ಣೆದುರೇ ಕನಸಿನ ಲ್ಯಾಂಬೋರ್ಗಿನಿ ಕಾರು​ ನುಚ್ಚುನೂರು!

ಎಷ್ಟೋ ಆಸೆಪಟ್ಟು ಕೋಟಿ - ಕೋಟಿ ಬೆಲೆಬಾಳುವ ಲ್ಯಾಂಬೋರ್ಗಿನಿ ಸ್ಫೋರ್ಟ್ಸ್​ ಕಾರು​ ತೆಗೆದುಕೊಂಡ ಆತನಿಗೆ ಬರೀ ನಿರಾಸೆ ಮಾತ್ರ ಉಳಿದಿದೆ. ಶೋರೂಂನಿಂದ ಪಡೆದ ಕೆಲವೇ ಕ್ಷಣಗಳಲ್ಲಿ ತನ್ನ ಕನಸಿನ ಕಾರು​ ಕಣ್ಣೆದುರೇ ನುಚ್ಚುನೂರಾಗಿರುವ ಘಟನೆ ಬ್ರಿಟನ್​ನಲ್ಲಿ ನಡೆದಿದೆ.

Lamborghini sports car, Lamborghini sports car crashes, Lamborghini sports car crashes news, Lamborghini sports car crashes latest news, ಲ್ಯಾಂಬೊರ್ಗಿನಿ ಸ್ಫೋರ್ಟ್ಸ್​ ಕಾರ್, ಲ್ಯಾಂಬೊರ್ಗಿನಿ ಸ್ಫೋರ್ಟ್ಸ್​ ಕಾರ್ ಅಪಘಾತ, ಲ್ಯಾಂಬೊರ್ಗಿನಿ ಸ್ಫೋರ್ಟ್ಸ್​ ಕಾರ್ ಅಪಘಾತ ಸುದ್ದಿ,
ಕೃಪೆ: Twitter

ಲಂಡನ್​: ಲ್ಯಾಂಬೋರ್ಗಿನಿ ಸ್ಫೋರ್ಟ್ಸ್​ ಕಾರ್​​ ಅತ್ಯಂತ ಆಕರ್ಷಿತ ವಾಹನ. ಈ ಕಾರಿನ ಮೌಲ್ಯ ಸುಮಾರು 2 ಕೋಟಿಗೂ ಅಧಿಕವಿದೆ. ಕೋಟಿ - ಕೋಟಿ ಬೆಲೆಬಾಳುವ ಈ ಕಾರ್​ನ್ನು ವ್ಯಕ್ತಿಯೊಬ್ಬ ಎಷ್ಟೋ ಆಸೆಯಿಂದ ಪಡೆದುಕೊಂಡಿದ್ದ. ಆದ್ರೆ ಶೋರೂಂನಿಂದ ಕಾರು​ ಪಡೆದ 20 ನಿಮಿಷಕ್ಕೆ ಅಪಘಾತ ಸಂಭವಿಸಿ ಆತನ ಕಣ್ಣೆದುರೇ ಕನಸಿನ ಕಾರು ನಜ್ಜಾಗಿರುವ ಘಟನೆ ಬ್ರಿಟನ್​ನ ವೇಕ್​ಫಿಲ್ಡ್​ನಲ್ಲಿ ನಡೆದಿದೆ.

ಹೌದು, ವ್ಯಕ್ತಿಯೊಬ್ಬ ಗ್ರೇ ಕಲರ್ ಲ್ಯಾಂಬೋರ್ಗಿನಿ ಹರಿಕೇನ್ ಸ್ಪೈಡರ್ ಮಾಡೆಲ್ ಕಾರನ್ನು ಸುಮಾರು 2 ಕೋಟಿ ರೂ.ಗೆ ಖರೀದಿಸಿದ್ದಾನೆ. ಶೋರೂಂನಿಂದ ಕಾರ್​ ಪಡೆದು ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಕೂಡಲೇ ಕಾರ​ನ್ನು ರಸ್ತೆ ಬದಿಗೆ ನಿಲ್ಲಿಸಿ ಏನಾಗಿದೆ ಎಂದು ಪರಿಶೀಲಿಸುತ್ತಿದ್ದ. ಆದ್ರೆ ಹಿಂದಿನಿಂದ ಬಂದ ಮತ್ತೊಂದು ಕಾರು ಲ್ಯಾಂಬೋರ್ಗಿನಿ ಕಾರ್​ಗೆ ಡಿಕ್ಕಿ ಹೊಡಿದಿದೆ.

ತಾನು ಮನಸಾರೆ ಇಷ್ಟಪಟ್ಟು ಖರೀದಿಸಿದ ಕಾರು ಕೇವಲ 20 ನಿಮಿಷಕ್ಕೆ ನಜ್ಜಾಗಿರುವುದು ಕಂಡು ಮಾಲೀಕ ಭಾವುಕನಾಗಿದ್ದಾನೆ. ಇನ್ನು ಕಾರು ಡಿಕ್ಕಿ ಹೊಡೆದ ವೇಗಕ್ಕೆ ಲ್ಯಾಂಬೋರ್ಗಿನಿ ಕಾರಿನ ಹಿಂಬದಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಳಿಕ ಕಾರಿನ ಮಾಲೀಕ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾನೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇನ್ನು ಪೊಲೀಸರು ಈ ಕಾರಿನ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಕಾರಿನ ಫೋಟೋ ನೋಡಿದ ನೆಟ್ಟಿಗರು ದುರಾದೃಷ್ಟ ಎಂದು ಕಮೆಂಟ್​ ಮಾಡಿದ್ದಾರೆ.

ABOUT THE AUTHOR

...view details