ಕರ್ನಾಟಕ

karnataka

ETV Bharat / international

ದೇವರನ್ನ ಟಚ್‌ ಮಾಡೋಕಾಗಿಲ್ಲ, ಗೋಡೆ ಕೆಡವೋಕಾಗಿಲ್ಲ.. ದಾದಾ ಗಂಗೂಲಿ - ಧೋನಿ 72..

ಕ್ರಿಕೆಟ್‌ ದೇವರು ಸಚಿನ್‌ 96 ಅರ್ಧಶತಕ ಸಿಡಿಸಿದ್ರೇ, ವಾಲ್‌ ಖ್ಯಾತಿಯ ಕನ್ನಡಿಗ ರಾಹುಲ್ ದ್ರಾವಿಡ್ 83 ಹಾಫ್‌ ಸೆಂಚುರಿ ಭಾರಿಸಿದ್ದಾರೆ. ಧೋನಿ ಇನ್ನೂ ಕ್ರಿಕೆಟ್‌ ದೇವರನ್ನ ಮುಟ್ಟೋಕಾಗಿಲ್ಲ. ಹಾಗೇ ಗೋಡೆ ಕೆಡವಿ ಹೊಸ ಮೈಲಿಗಲ್ಲೂ ಸ್ಥಾಪಿಸೋಕೆ ಇನ್ನೂ ಸಾಧ್ಯವಾಗಿಲ್ಲ. ದಾಖಲೆಗಳೇನೇ ಇರಲಿ, ಧೋನಿ ಮತ್ತೆ ಮತ್ತೆ ತಮ್ಮ ಅನಿವಾರ್ಯತೆಯನ್ನ ಶ್ರೇಷ್ಠ ಬ್ಯಾಟಿಂಗ್‌, ಕೀಪಿಂಗ್‌ನಿಂದ ತೋರಿಸ್ತಿದ್ದಾರೆ.

ದಾದಾ ಗಂಗೂಲಿ-ಮಾಹಿ 72

By

Published : Jun 28, 2019, 5:41 PM IST

ಮ್ಯಾಂಚೆಸ್ಟರ್‌ :ಟೀಕಾಕಾರರಿಗೆ ಮಾಜಿ ಕೂಲ್‌ ಕ್ಯಾಪ್ಟನ್‌ ಮಹೇಂದ್ರ ಸಿಂಗ್‌ ಧೋನಿ ತಮ್ಮ ಬ್ಯಾಟ್‌ ಮೂಲಕವೇ ಮಾರುತ್ತರ ಕೊಟ್ಟಿದ್ದಾರೆ. ಇದರ ಮಧ್ಯೆಯೇ ವಿಂಡೀಸ್‌ ವಿರುದ್ಧದ ಪಂದ್ಯದಲ್ಲಿ ಧೋನಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದಾರೆ. ಆದರೆ, ಇವರಿಗಿನ್ನೂ ಕ್ರಿಕೆಟ್‌ ದೇವರನ್ನ ಟಚ್ ಮಾಡೋಕಾಗಿಲ್ಲ.

ಕೃಪೆ : ಟ್ವಿಟರ್... ಮಹೇಂದ್ರ ಸಿಂಗ್‌ ಧೋನಿ ಗುರಿ ಸ್ಪಷ್ಟ..

ಟೀಕೆಗಳಿಗೆ ಬ್ಯಾಟ್‌ನಿಂದಲೇ ಉತ್ತರ ಕೊಟ್ಟ ಮಹೇಂದ್ರ!

ಟೀಂ ಇಂಡಿಯಾಗೆ ಕೆರಿಬಿಯನ್ನರ ವಿರುದ್ಧ ಅರ್ಹ ಜಯ ಸಿಕ್ಕಿದೆ. ಮ್ಯಾಂಚೆಸ್ಟರ್‌ನ ಔಲ್ಡ್‌ ಟ್ರಾಫೋರ್ಡ್‌ ಮೈದಾನದಲ್ಲಿ ಬ್ಲ್ಯೂ ಬಾಯ್ಸ್ ಮತ್ತೆ ಪರಾಕ್ರಮ ಮೆರೆದಿದ್ದಾರೆ. ಬ್ಯಾಟಿಂಗ್‌, ಬೌಲಿಂಗ್‌, ಫೀಲ್ಡಿಂಗ್‌.. ಎಲ್ಲ ವಿಧದಲ್ಲೂ ಕಿಂಗ್‌ ಕೊಹ್ಲಿ ಹುಡುಗರ ಆಟವನ್ನ ಎಷ್ಟು ವರ್ಣಿಸಿದರೂ ಸಾಲಲ್ಲ. ಧೋನಿ ಕೊನೆಯ ಓವರ್‌ಗಳಲ್ಲಿ ಸಿಡಿಸಿದ ಆಕರ್ಷಕ ಅರ್ಧ ಶತಕ, ಅವರ ವಿರುದ್ಧದ ಎಲ್ಲ ಟೀಕೆಗಳಿಗೂ ಸ್ಪಷ್ಟ ಉತ್ತರದಂತಿತ್ತು.

ಕೃಪೆ : ಟ್ವಿಟರ್... ಬ್ಯಾಟ್‌ನಿಂದಲೇ ಉತ್ತರಿಸಿದ ಧೋನಿ

ವಿರಾಟ್‌ಗೆ ಸಾಥ್‌ ನೀಡಬೇಕಿತ್ತು, ಧೋನಿ ಅದನ್ನೇ ಮಾಡಿದರು!

28.5 ಓವರ್‌ಗೆ ಧೋನಿ ಬ್ಯಾಟಿಂಗ್‌ಗೆ ಬಂದಾಗ ತಂಡ 4 ವಿಕೆಟ್‌ ನಷ್ಟಕ್ಕೆ 140 ರನ್‌ ಪೇರಿಸಿತ್ತು. ಕೊಹ್ಲಿಗೆ ಒಳ್ಳೇ ಸಾಥ್‌ ನೀಡಬಲ್ಲ ಬ್ಯಾಟ್ಸ್‌ಮೆನ್‌ ಬೇಕಿತ್ತು. ಕೆರಿಬಿಯನ್ನರ ವಿರುದ್ಧ ಸ್ಪರ್ಧಾತ್ಮಕ ಸ್ಕೋರ್ ಮಾಡ್ಲೇಬೇಕಿತ್ತು. ಆದರೆ, ಧೋನಿ ಆಫ್ಘನ್‌ ವಿರುದ್ಧ ಆಡಿದಂತೆ ನಿನ್ನೆಯೂ ಆರಂಭದಲ್ಲಿ ಬ್ಯಾಟ್‌ ಮಾಡಿದರು. 40 ಬೌಲ್‌ ಎದುರಿಸಿ ಬರೀ 20 ರನ್ ಪೇರಿಸಿದ್ದರು. ಸಾಕಷ್ಟು ಓವರ್‌ಗಳಿದ್ದ ಕಾರಣ ಕ್ರೀಸ್‌ನಲ್ಲಿ ಸೆಟ್ಲ್ ಆಗ್ಬೇಕಿತ್ತು. ಹಾರ್ದಿಕ್‌ ಪಾಂಡ್ಯ ಮಾತ್ರ ಉಳಿದಿದ್ದರು. ಧೋನಿ-ವಿರಾಟ್‌ ಜತೆಯಾಟ 40 ರನ್‌ ಸೇರಿಸಿತ್ತು. ಆದರೆ, 39ನೇ ಓವರ್‌ನಲ್ಲಿ ಜಾಸನ್‌ ಹೋಲ್ಡರ್‌ ಬೌಲಿಂಗ್‌ನಲ್ಲಿ ಕೊಹ್ಲಿ ವಿಕೆಟ್‌ವೊಪ್ಪಿಸಿದರು. ಹಾರ್ದಿಕ್‌ ಮತ್ತು ಧೋನಿ ಜೋಡಿ ಮತ್ತೊಮ್ಮೆ ಸ್ಪೆಷಲ್ ಇನ್ನಿಂಗ್ಸ್‌ ಕಟ್ಟಿತು. 6ನೇ ವಿಕೆಟ್‌ಗೆ 60 ಬೌಲ್‌ಗೆ ಉಪಯುಕ್ತ 70 ರನ್‌ಕಾಣಿಕೆ ನೀಡಿದರು. ಇದರಿಂದಾಗಿ ಟೀಂ ಇಂಡಿಯಾ 250ರ ಗಡಿ ದಾಡಿತು.

ಕೃಪೆ : ಟ್ವಿಟರ್... ಧೋನಿ ಇರೋದೇ ದಾಖಲೆ ಮುರಿಯೋಕೆ..

ಕೊನೆಯ ಓವರ್‌ನ 6 ಬಾಲ್‌ಗೆ 16ರನ್‌ ಸಿಡಿಸಿದರು ಧೋನಿ!

ಮಾಹಿ ಕೊನೆಯ 50ನೇ ಓವರ್‌ವರೆಗೂ ಆಡುವ ಅವಶ್ಯಕತೆ ಇತ್ತು. ಕೊನೆ ಓವರ್‌ನ ಥಾಮಸ್‌ ಬೌಲಿಂಗ್‌ನಲ್ಲಿ 16ರನ್‌ ಪೇರಿಸಿದರು ಧೋನಿ. 20 ರನ್‌ ಗಳಿಸಲು 40 ಬಾಲ್ ಆಡಿದ್ದ ಮಾಹಿ ಆ ಬಳಿಕ 21 ಬಾಲ್‌ಗಳಲ್ಲಿ 36 ರನ್‌ ಗಳಿಸಿದರು. ಇದರಿಂದಾಗಿ ಟೀಂ ಇಂಡಿಯಾ 268ರನ್‌ ಗಳಿಸಿತು. 56 ರನ್‌ ಸಿಡಿಸಲು ಧೋನಿ 61ಬಾಲ್‌ ತೆಗೆದುಕೊಂಡರು. ಅಷ್ಟೇ ಅಲ್ಲ, ದಾಖಲೆಯ ಅರ್ಧಶತಕ ಪೂರೈಸಿದರು.

ಕೃಪೆ : ಟ್ವಿಟರ್... ಕೆಣಕಿದ್ರೇ ಮಾಹಿ ಉತ್ತರ ಹೀಗೇ ಇರುತ್ತೆ..

ಗಂಗೂಲಿ-ಧೋನಿ ಇಬ್ಬರೂ 72.. ಸಚಿನ್‌ 96- ದ್ರಾವಿಡ್‌83!

ಬಂಗಾಳ ಹುಲಿ ಸೌರವ್‌ ಗಂಗೂಲಿ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 72 ಅರ್ಧ ಶತಕ ಸಿಡಿಸಿದ್ದಾರೆ. ಈ ದಾಖಲೆಯನ್ನ ನಿನ್ನೆ ಧೋನಿ ಸರಗಟ್ಟಿರೋದು ವಿಶೇಷ. 72ನೇ ಹಾಫ್‌ ಸೆಂಚುರಿ ಸಿಡಿಸಿದ್ದಷ್ಟೇ ಅಲ್ಲ, ಧೋನಿ ತಂಡದ ಗೆಲುವಿಗೆ ಅಮೂಲ್ಯ ಕಾಣಿಕೆ ನೀಡಿದರು. ಆದರೆ, ಕ್ರಿಕೆಟ್‌ ದೇವರು ಸಚಿನ್‌ 96 ಅರ್ಧಶತಕ ಸಿಡಿಸಿದ್ರೇ, ವಾಲ್‌ ಖ್ಯಾತಿಯ ಕನ್ನಡಿಗ ರಾಹುಲ್ ದ್ರಾವಿಡ್ 83 ಹಾಫ್‌ ಸೆಂಚುರಿ ಭಾರಿಸಿದ್ದಾರೆ. ಧೋನಿ ಇನ್ನೂ ಕ್ರಿಕೆಟ್‌ ದೇವರನ್ನ ಮುಟ್ಟೋಕಾಗಿಲ್ಲ. ಹಾಗೇ ಗೋಡೆ ಕೆಡವಿ ಹೊಸ ಮೈಲಿಗಲ್ಲೂ ಸ್ಥಾಪಿಸೋಕೆ ಇನ್ನೂ ಸಾಧ್ಯವಾಗಿಲ್ಲ. ದಾಖಲೆಗಳೇನೇ ಇರಲಿ, ಧೋನಿ ಮತ್ತೆ ಮತ್ತೆ ತಮ್ಮ ಅನಿವಾರ್ಯತೆಯನ್ನ ಶ್ರೇಷ್ಠ ಬ್ಯಾಟಿಂಗ್‌, ಕೀಪಿಂಗ್‌ನಿಂದ ತೋರಿಸ್ತಿದ್ದಾರೆ.

ಕೃಪೆ : ಟ್ವಿಟರ್... ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್..
ಕೃಪೆ : ಟ್ವಿಟರ್... ದೇವರ ಮುಟ್ಟಲು ಇನ್ನೂ ದೂರ ಕ್ರಮಿಸಬೇಕು..
ಕೃಪೆ : ಟ್ವಿಟರ್... ದಾದಾ ಗಂಗೂಲಿ ಜತೆ ಕೂಲ್ ಕೂಲ್ ಮಹೇಂದ್ರ ಸಿಂಗ್‌ ಧೋನಿ..

ABOUT THE AUTHOR

...view details