ಲಂಡನ್: ಯುಕೆಯ ಕ್ರಾನ್ಫೀಲ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ತಂಡವೊಂದು ಎಕ್ಸ್ರೇ ಮೂಲಕ ಕೋವಿಡ್-19 ಪತ್ತೆ ಹಚ್ಚುವ ಕಂಪ್ಯೂಟರ್ ಮಾದರಿಯನ್ನು ವಿನ್ಯಾಸಗೊಳಿಸಿದೆ.
ಕೋವಿಡ್ ಪತ್ತೆ ಹಚ್ಚಲು ಕಂಪ್ಯೂಟರ್ ಮಾದರಿಯನ್ನು ವಿನ್ಯಾಸಗೊಳಿಸಿದ ವಿದ್ಯಾರ್ಥಿಗಳ ತಂಡ - A team of students designed the Covid detection machine
ಇಡೀ ಜಗತ್ತು ಕೊರೊನಾ ವೈರಸ್ ವಿರುದ್ಧ ಸಮರ ಸಾರುತ್ತಿರುವ ಈ ಸಂದರ್ಭದಲ್ಲಿ ಇಂಗ್ಲೆಂಡಿನ ವಿದ್ಯಾರ್ಥಿಗಳ ತಂಡವೊಂದು ಕೋವಿಡ್ ಪತ್ತೆ ಹಚ್ಚುವ ಕಂಪ್ಯೂಟರ್ ಮಾದರಿಯನ್ನು ವಿನ್ಯಾಸಗೊಳಿಸಿದೆ. ಇದು ಎಕ್ಸ್ರೇ ಮೂಲಕ ಸೋಂಕು ಪತ್ತೆ ಹಚ್ಚಲಿದೆ.

ವರದಿಗಳ ಪ್ರಕಾರ, ಈ ಮಾದರಿಯು ಸಾಮಾನ್ಯವಾಗಿ ಬರಿಗಣ್ಣಿನಿಂದ ಗುರುತಿಸಲಾಗದ ಮಾಹಿತಿಯನ್ನು ನಿರ್ಣಯಿಸಿ ಕೊರೊನಾ ಸೋಂಕು ತಗುಲಿದೆಯೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚುತ್ತದೆ. ಎದೆಯ ಎಕ್ಸ್ರೇಯನ್ನು ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ) ಮೂಲಕ ವಿಶ್ಲೇಷಿಸಿ ಸೋಂಕು ಪತ್ತೆ ಹಚ್ಚುತ್ತದೆ.
ಎಐ ಮೂಲಕ ಮೊದಲು ಎಕ್ಸ್ರೇ ಸಹಾಯದಿಂದ ನ್ಯುಮೋನಿಯಾ ಪತ್ತೆ ಹಚ್ಚುವ ಈ ಮಾದರಿಯೂ, ಬಳಿಕ ಎರಡನೇ ಹಂತವಾದ ಕೋವಿಡ್ ಪಾಸಿಟಿವ್ ಕಂಡು ಹಿಡಿಯಲಿದೆ. ಕ್ರಾನ್ಫೀಲ್ಡ್ ವಿಶ್ವವಿದ್ಯಾಲಯದ ಎಂಎಸ್ಸಿ ವಿದ್ಯಾರ್ಥಿಗಳಿಗೆ ನೀಡಿದ ಪ್ರಾಜೆಕ್ಟ್ ಕೆಲಸವನ್ನು ಸವಾಲಾಗಿ ಸ್ವೀಕರಿಸಿದ ವಿದ್ಯಾರ್ಥಿಗಳ ತಂಡ ಈ ಹೊಸ ಮಾದರಿಯನ್ನು ವಿನ್ಯಾಸಗೊಳಿಸಿದೆ.