ಕರ್ನಾಟಕ

karnataka

ETV Bharat / international

ನೀರವ್​ ಮೋದಿಗೆ ಮತ್ತೆ ಸಂಕಷ್ಟ... ಸ್ವಿಸ್ ಅಧಿಕಾರಿಗಳಿಂದ ನಾಲ್ಕು ಬ್ಯಾಂಕ್​​​​ ಖಾತೆ ಜಪ್ತಿ - ಜಪ್ತಿ

ಮಾರ್ಚ್​ ತಿಂಗಳಲ್ಲಿ ಬಂಧಿತನಾಗಿರುವ ನೀರವ್ ಮೋದಿ ಸದ್ಯ ವಂಡ್ಸ್​ವರ್ತ್ ಜೈಲಿನಲ್ಲಿದ್ದಾನೆ. ಈಗಾಗಲೇ ನೀರವ್ ಮೋದಿ ನಾಲ್ಕು ಬಾರಿ ಜಾಮೀನಿನ ಮೊರೆ ಹೋಗಿದ್ದು, ಕೋರ್ಟ್​ ಎಲ್ಲ ಅರ್ಜಿಗಳನ್ನ ತಿರಸ್ಕರಿಸಿದೆ.

ನೀರವ್​ ಮೋದಿ

By

Published : Jun 27, 2019, 1:40 PM IST

ಲಂಡನ್:ಕೋಟ್ಯಂತರ ರೂಪಾಯಿ ವಂಚಿಸಿ ಭಾರತದಿಂದ ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್​ ಮೋದಿ ಹಾಗೂ ಆತನ ಸಹೋದರಿ ಪೂರ್ವಿ ಮೋದಿಗೆ ಸೇರಿದ ನಾಲ್ಕು ಸ್ವಿಸ್​ ಬ್ಯಾಂಕ್ ಖಾತೆಯನ್ನು ಸ್ವಿಟ್ಜರ್​​ಲ್ಯಾಂಡ್ ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ.

ಜಾರಿ ನಿರ್ದೇಶನಾಲಯ(ಇಡಿ) ಮನವಿ ಮೇರೆಗೆ ಸ್ವಿಸ್ ಅಧಿಕಾರಿಗಳು ಬ್ಯಾಂಕ್​ ಖಾತೆ ಜಪ್ತಿ ಮಾಡಿದ್ದು, ಅಕೌಂಟ್​​ನಲ್ಲಿದ್ದ ಆರು ಮಿಲಿಯನ್ ಅಮೆರಿಕನ್​ ಡಾಲರ್​​​ ನಗದನ್ನು ವಶಪಡಿಸಿಕೊಂಡಿದ್ದಾರೆ.

ಮಾರ್ಚ್​ ತಿಂಗಳಲ್ಲಿ ಬಂಧಿತನಾಗಿರುವ ನೀರವ್ ಮೋದಿ ಸದ್ಯ ವಂಡ್ಸ್​ವರ್ತ್ ಜೈಲಿನಲ್ಲಿದ್ದಾನೆ. ಈಗಾಗಲೇ ನೀರವ್ ಮೋದಿ ನಾಲ್ಕು ಜಾಮೀನಿನ ಮೊರೆ ಹೋಗಿದ್ದು, ಕೋರ್ಟ್​ ಎಲ್ಲ ಅರ್ಜಿಯನ್ನು ತಿರಸ್ಕರಿಸಿದೆ.

ಲಂಡನ್​ ಕಾನೂನಿನ ಅನ್ವಯ ಪ್ರತಿ ನಾಲ್ಕು ವಾರಕ್ಕೊಮ್ಮೆ ಆರೋಪಿಯನ್ನು ಕೋರ್ಟ್​ ಮುಂದೆ ಹಾಜರಿಪಡಿಸಬೇಕು. ನೀರವ್ ಮೋದಿಯ ಮುಂದಿನ ವಿಚಾರಣೆ ಜುಲೈ 29ರಂದು ನಡೆಯಲಿದೆ.

ABOUT THE AUTHOR

...view details