ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಹಣಕಾಸು ಸಚಿವಾಲಯ ಬುಧವಾರ ವಿವಿಧ ತೆರಿಗೆ ಪಾವತಿ ಗಡುವನ್ನು ವಿಸ್ತರಿಸುವುದಾಗಿ ತಿಳಿಸಿದೆ.
2019-20ರ ಹಣಕಾಸು ವರ್ಷಕ್ಕೆ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017ರ ಅಡಿ ವಾರ್ಷಿಕ ಲಾಭ ಪಾವತಿಯ ದಿನಾಂಕವನ್ನು 2021ರ ಫೆಬ್ರವರಿ 28ಕ್ಕೆ ವಿಸ್ತರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
2020 ಹಣಕಾಸು ವರ್ಷದ ವೈಯಕ್ತಿಕ ತೆರಿಗೆದಾರರು ಆದಾಯ ತೆರಿಗೆ ರಿಟರ್ನ್ಸ್ ನೀಡುವ ದಿನಾಂಕವನ್ನು 2020 ಡಿಸೆಂಬರ್ 31ರಿಂದ 2021 ಜನವರಿ 10ಕ್ಕೆ ವಿಸ್ತರಿಸಲಾಗಿದೆ. ಕಂಪನಿಗಳು 2019-20ರ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಅಂತಿಮ ದಿನಾಂಕವನ್ನು 15 ದಿನಗಳವರೆಗೆ ಅಂದರೆ, 2021ರ ಫೆಬ್ರವರಿ 15ಕ್ಕೆ ವಿಸ್ತರಿಸಲಾಗಿದೆ.