ಲಂಡನ್:ಭಾರತದಲ್ಲಿಮಹಾಮಾರಿ ಕೊರೊನಾ ವೈರಸ್ ಹಾವಳಿಯ ಎರಡನೇ ಅಲೆ ಜೋರಾಗಿದ್ದು, ಇದೇ ಕಾರಣಕ್ಕಾಗಿ ಲಂಡನ್ ಪ್ರಧಾನಿ ಭಾರತದ ಪ್ರವಾಸ ರದ್ದುಗೊಳಿಸಿದ್ದಾರೆ.
ಕೊರೊನಾ ಹಾವಳಿ: ಭಾರತದ ಪ್ರವಾಸ ರದ್ಧುಗೊಳಿಸಿದ ಇಂಗ್ಲೆಂಡ್ ಪ್ರಧಾನಿ! - Boris Johnson's India Visit
ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಲಂಡನ್ ಪ್ರಧಾನಿ ತಮ್ಮ ಭಾರತದ ಪ್ರವಾಸ ರದ್ದುಗೊಳಿಸಿ ಮಹತ್ವದ ಆದೇಶ ಹೊರಹಾಕಿದ್ದಾರೆ.
![ಕೊರೊನಾ ಹಾವಳಿ: ಭಾರತದ ಪ್ರವಾಸ ರದ್ಧುಗೊಳಿಸಿದ ಇಂಗ್ಲೆಂಡ್ ಪ್ರಧಾನಿ! Boris Johnson](https://etvbharatimages.akamaized.net/etvbharat/prod-images/768-512-11459777-thumbnail-3x2-wdfdfd.jpg)
ಗಣರಾಜ್ಯೋತ್ಸವ ಸಂದರ್ಭದಲ್ಲಿ ಭಾರತಕ್ಕೆ ವಿಶೇಷ ಅತಿಥಿಯಾಗಿ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಆಗಮಿಸಬೇಕಾಗಿತ್ತು. ಆದರೆ, ಕೊರೊನಾ ಹಾವಳಿ ಹೆಚ್ಚಾದ ಕಾರಣ ಅವರು ತಮ್ಮ ಭಾರತ ಭೇಟಿ ರದ್ಧುಗೊಳಿಸಿದ್ದರು. ಇದಾದ ಬಳಿಕ ಅವರು ಏಪ್ರಿಲ್ ಅಂತ್ಯಕ್ಕೆ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಅಲ್ಲಿನ ಪ್ರಧಾನಿ ಕಚೇರಿ ಮಾಹಿತಿ ನೀಡಿತ್ತು.
ಆದರೆ, ಸದ್ಯ ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ತಮ್ಮ ಪ್ರವಾಸ ರದ್ದುಗೊಳಿಸಿದ್ದಾರೆ. ಆದರೆ ಉಭಯ ದೇಶದ ಪ್ರಧಾನಿಗಳು ವರ್ಚುಯಲ್ ಸಭೆ ನಡೆಸಿ ಮಹತ್ವದ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಯುರೋಪಿಯನ್ ಯೂನಿಯನ್ನಿಂದ ಇಂಗ್ಲೆಂಡ್ ಹೊರ ಬಿದ್ದಾಗಿನ ಬಳಿಕ ಬೋರಿಸ್ ಜಾನ್ಸನ್ ಭಾರತದ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದರು.