ಕರ್ನಾಟಕ

karnataka

ETV Bharat / international

ಪತಿ ಅಲೆಕ್ಸಿ ಬಿಡುಗಡೆಗೆ ಆಗ್ರಹಿಸಿದ್ದ ಪತ್ನಿ ನವಲ್ನಾಯಾಗೆ ದಂಡ - ರಷ್ಯಾ ಇತ್ತೀಚಿನ ಸುದ್ದಿ

ಅಲೆಕ್ಸಿ ನವಲ್ನಿ ಬಂಧನ ಮುಕ್ತವಾಗಬೇಕೆಂದು ಆಗ್ರಹಿಸಿ ಆತನ ಪತ್ನಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ನಿಯಮ ಉಲ್ಲಂಘಿಸಿದ್ದಾಲೆ ಎಂದು ಮಾಸ್ಕೋ ನ್ಯಾಯಾಲಯ 20,000 ರೂಬಲ್ಸ್ ದಂಡ ವಿಧಿಸಿದೆ..

Breaking News

By

Published : Feb 1, 2021, 8:03 PM IST

ಮಾಸ್ಕೋ: ಅಲೆಕ್ಸಿ ನವಲ್ನಿ ಬಿಡುಗಡೆಯಾಗಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಅವರ ಪತ್ನಿ ನವಲ್ನಾಯಾ ವಿರುದ್ಧ ಮಾಸ್ಕೋ ನ್ಯಾಯಾಲಯ 20,000 ರೂಬಲ್ಸ್ (ಸುಮಾರು $ 265) ದಂಡ ವಿಧಿಸುವಂತೆ ಸೋಮವಾರ ಆದೇಶಿಸಿದೆ.

ಪ್ರತಿಭಟನೆ ಸಂದರ್ಭದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಜೈಲು ಶಿಕ್ಷೆಯನ್ನು ಎದುರಿಸುತ್ತಿರುವ ನವಲ್ನಿಯನ್ನು ಅಧಿಕಾರಿಗಳು ಮುಕ್ತಗೊಳಿಸಬೇಕೆಂದು ಒತ್ತಾಯಿಸಿ ಹತ್ತಾರು ಜನರು ರಷ್ಯಾದ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.

ಈ ವೇಳೆ ನವಲ್ನಾಯಾ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಆಕೆಗೆ ದಂಡ ವಿಧಿಸಿಲಾಗಿದೆ. ಈ ಬಗ್ಗೆ ನವಲ್ನಾಯಾ ವಕೀಲ ಸ್ವೆಟ್ಲಾನಾ ಡೇವಿಡೋವಾ ಇಂಟರ್ಫ್ಯಾಕ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸಲು ಯೋಜನೆ ಇದೆ ಎಂದು ಡೇವಿಡೋವಾ ಹೇಳಿದ್ದಾರೆ.

ABOUT THE AUTHOR

...view details