ಕೀವ್(ಉಕ್ರೇನ್):ಕಳೆದ ಎಂಟು ದಿನಗಳಿಂದ ಉಕ್ರೇನ್ ವಿರುದ್ಧ ರಷ್ಯಾ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದೆ. ರಾಜಧಾನಿ ಕೀವ್, ಎರಡನೇ ಅತಿದೊಡ್ಡ ನಗರ ಖಾರ್ಕಿವ್ ಸೇರಿದಂತೆ ಪ್ರಮುಖ ನಗರಗಳ ಮೇಲೆ ಭಾರಿ ಪ್ರಮಾಣದಲ್ಲಿ ಬಾಂಬ್, ಶೆಲ್ ಸುರಿಮಳೆಯಾಗುತ್ತಿದೆ. ಇದರ ಮಧ್ಯೆ ಯುವ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ.
ರಷ್ಯಾದ ಬಾಂಬ್ ದಾಳಿಯ ನಡುವೆಯೂ ಕೂಡ ಉಕ್ರೇನ್ನ ಈ ಜೋಡಿ ಒಡೆಸಾ ನಗರದ ಬಾಂಬ್ ಶೆಲ್ಟರ್ ತಾಣದಲ್ಲಿ ಮದುವೆ ಮಾಡಿಕೊಂಡರು.