ಒಟ್ಟಾವಾ (ಕೆನಡಾ):ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಅವರ ಪತ್ನಿಗೆ ಕೊರೊನಾ ವೈರಸ್ ಇರುವುದು ಪರೀಕ್ಷಗಳಿಂದ ಸಾಬೀತಾಗಿದೆ. ಹೀಗಾಗಿ ಕೆನಡಾದಲ್ಲೂ ಕೊರೊನಾ ವೈರಸ್ ಆತಂಕವನ್ನ ಸೃಷ್ಟಿಸಿದೆ.
ಕೆನಡಾ ಪ್ರಧಾನಿ ಹೆಂಡತಿಯನ್ನ ಬಿಡದ ಕೊರೊನಾ ವೈರಸ್...ಹೆಚ್ಚಿದ ಆತಂಕ - ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ
ಮಹಾಮಾರಿ ಕೊರೊನಾ ವೈರಸ್ನಿಂದಾಗಿ ಜನ ನೆಮ್ಮದಿಯ ಬದುಕು ಕಳೆದುಕೊಂಡಿದ್ದಾರೆ. ಯಾವ ಸಮಯದಲ್ಲಿ ನಮಗೆ ಸೋಂಕು ತಗುಲುತ್ತದೋ ಎಂಬ ಭಯದಲ್ಲೇ ದಿನ ದೂಡುತ್ತಿದ್ದಾರೆ.
ಟ್ರೊಡೊ ಪತ್ನೊ ಸೋಫಿಯಾ ಗ್ರೆಗೊರಿಯಾಗೆ ಕೋವಿಡ್ 19 ಇರುವುದು ಇಂದು ಗೊತ್ತಾಗಿದೆ. ಅವರನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಅವರ ರಕ್ತದ ಮಾದರಿಯಲ್ಲಿ ಕೋವಿಡ್-19 ಪಾಸಿಟಿವ್ ಎಂದು ವರದಿ ಬಂದಿದೆ ಎಂದು ಕೆನಡಾ ಪ್ರಧಾನಿ ಇಲಾಖೆ ಮೂಲಗಳು ದೃಢಪಡಿಸಿದ್ದು, ಈ ಸಂಬಂಧ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಹೀಗಾಗಿ ಅವರನ್ನ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಆರೋಗ್ಯವಾಗಿದ್ದು, ಮುಂಜಾಗ್ರತ ಕ್ರಮವಾಗಿ ಎಲ್ಲ ಕ್ರಮಗಳನ್ನ ಕೈಗೊಳ್ಳಲಾಗಿದೆ. ಇನ್ನು ಪ್ರಧಾನಿ ಜಸ್ಟಿನ್ ಅವರಿಗೆ ಸೋಂಕು ತಗುಲಿಲ್ಲ. ಅವರು ಆರೋಗ್ಯವಾಗಿದ್ದು, ವೈದ್ಯರ ಸಲಹೆವರೆಗೆ 14 ದಿನಗಳ ಕಾಲ ಐಸೋಲೇಷನ್ನಲ್ಲಿ ಇಡಲು ನಿರ್ಧರಿಸಲಾಗಿದೆ. ಅವರನ್ನ ಪರೀಕ್ಷೆಗೆ ಒಳಪಡಿಸಿಲ್ಲ ಎಂದು ವೈದ್ಯರು ದೃಢಪಡಿಸಿದ್ದಾರೆ. ನಾಳೆ ಅವರು ಕೆನಡಿಯನ್ನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಿ ಕಚೇರಿ ಮೂಲಗಳು ಹೇಳಿವೆ.