ಮಾರ್ಗರೆಟ್ ರಿವರ್/ಆಸ್ಟ್ರೇಲಿಯಾ: ಮಾರ್ಗರೇಟ್ ನದಿಯ ಅಂಚಿನಲ್ಲಿರುವ ಬುಷ್ಲ್ಯಾಂಡ್ ಪಟ್ಟಣದಲ್ಲಿ ಅಪರೂಪದ ಮುಸುಕುಧಾರಿ ಗೂಬೆಗಳು ಪತ್ತೆಯಾಗಿವೆ.
ಸ್ವಯಂಸೇವಕರಾದ ಬಾಯ್ಡ್ ವೈಕ್ಸ್ ತಮ್ಮ ಸತತ ಪರಶ್ರಮದ ಮೂಲಕ ಮಾರ್ಗರೇಟ್ ನದಿ ಸುತ್ತಮುತ್ತ ಈ ವಿಶೇಷ ಪಕ್ಷಿಗಳಾದ ಮುಸುಕುಧಾರಿ ಗೂಬೆಗಳ ಅಸ್ತಿತ್ವವನ್ನು ಗುರುತಿಸಿದ್ದಾರೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ವೈಕ್ಸ್, 'ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಈವರೆಗೂ ಬೇರೆ ಯಾರೂ ಕಂಡಿರದಂತಹದ್ದನ್ನು ನಾವು ನೋಡಿದ್ದೇವೆ' ಎಂದು ಥ್ರಿಲ್ ಆಗಿದ್ದಾರೆ. ಇದೀಗ ಮಾರ್ಗರೇಟ್ ನದಿಯ ಸುತ್ತಮುತ್ತ ಇಂಥ ಹಲವು ಮುಸುಕುಧಾರಿ ಗೂಬೆಗಳು ವಾಸಿಸುತ್ತಿರುವುದನ್ನು ವೈಕ್ಸ್ ಮತ್ತವರ ಸ್ವಯಂ ಸೇವಕರ ತಂಡ ಪತ್ತೆ ಹಚ್ಚಿದೆ.
ಆಸ್ಟ್ರೇಲಿಯಾದ ಸುತ್ತಮುತ್ತಲಿನ ಮುಖವಾಡದ ಗೂಬೆಗಳ ಸಂಖ್ಯೆಯ ಬಗ್ಗೆ ಹೆಚ್ಚು ತಿಳಿದಿಲ್ಲ. ಅವುಗಳನ್ನು ವಾಸ್ತವವಾಗಿ ಮೂರು ವಿಭಿನ್ನ ಸಂರಕ್ಷಣಾ ಸ್ಥಿತಿಗಳ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ. ದುರ್ಬಲ, ಅಳಿವಿನಂಚಿನ ಮತ್ತು ಕೊನೆಗಾಣುತ್ತಿರುವ ಪಕ್ಷಿಗಳ ಸಂತತಿಯ ಪಟ್ಟಿಯಲ್ಲಿ ಇವುಗಳನ್ನು ಗುರ್ತಿಸಲಾಗಿದೆ.
ಇದನ್ನೂ ಓದಿ:ಕೋವಿಡ್ ಲಸಿಕೆ ಪಡೆದ ಸೌದಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್