ನವದೆಹಲಿ :ಭಾರತದಿಂದ ಪರಾರಿಯಾಗಿರುವ ಉದ್ಯಮಿ ಮೆಹುಲ್ ಚೋಕ್ಸಿ ಅವರ ವಕೀಲ ಮೈಕೆಲ್ ಪೋಲಾಕ್ ವಿರುದ್ಧ ಸಾಲಿಸಿಟರ್ಸ್ ರೆಗ್ಯುಲೇಶನ್ ಅಥಾರಿಟಿ (ಎಸ್‌ಆರ್‌ಎ) ಇಂಗ್ಲೆಂಡ್ ಹಾಗೂ ಮತ್ತು ವೇಲ್ಸ್‌ನಲ್ಲಿ ದೂರು ದಾಖಲಿಸಲಾಗಿದೆ. ಅವರ ಕಕ್ಷಿದಾರನ ಪರವಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳಿಲ್ಲ ಎಂದು ದೂರು ದಾಖಲಾಗಿದೆ.
ಚೋಕ್ಸಿಯನ್ನು ಅಪಹರಿಸಿರುವ ಬಗ್ಗೆ ಪೋಲಾಕ್ ಮಾಧ್ಯಮಗಳಿಗೆ ನೀಡಿದ ಹೇಳಿಕೆಗಳಿಗೆ ಹಾಗೂ ಸ್ಕಾಟ್ಲೆಂಡ್ ಯಾರ್ಡ್ ಮತ್ತು ವಾರ್ ಕ್ರೈಮ್ಸ್ ಘಟಕಕ್ಕೆ ದೂರು ದಾಖಲಿಸಿದ್ದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಮೈಕೆಲ್ ಪೋಲಾಕ್ ವಿರುದ್ಧ ದಾಖಲಾದ ದೂರಿನಲ್ಲಿ ಹೇಳಲಾಗಿದೆ.
ಕ್ಲೈಂಟ್‌ನ KYC (Know Your Customer ಅಥವಾ ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಮಾಡುವುದು ಯುನೈಟೆಡ್ ಕಿಂಗ್‌ಡಂನಲ್ಲಿ ಬಹಳ ಮುಖ್ಯ ಎಂದು ದೂರುದಾರರು ಸೂಚಿಸಿದ್ದಾರೆ. ಪೋಲಾಕ್ ತನ್ನ ಕ್ಲೈಂಟ್ ಚೋಕ್ಸಿಯ ಮೇಲೆ KYC ಮತ್ತು AML (anti-money laundering ಅಥವಾ ಮನಿ ಲಾಂಡರಿಂಗ್ ವಿರೋಧಿ) ತಪಾಸಣೆ ನಡೆಸುವಲ್ಲಿ ವಿಫಲನಾಗಿದ್ದು, ಚೋಕ್ಸಿ ಭಾರತದ ಮೋಸ್ಟ್ ವಾಂಟೆಡ್ ವಂಚಕ ಎಂದು ದೂರಿನಲ್ಲಿ ಹೇಳಲಾಗಿದೆ.
ಪ್ರಸ್ತುತ ಡೊಮಿನಿಕಾದಲ್ಲಿ ಬಂಧಿಸಲಾಗಿರುವ ಶತಕೋಟಿ ಡಾಲರ್ ವಂಚಕ ಚೋಕ್ಸಿಯ ಕೆವೈಸಿ, ಎಎಂಎಲ್, ನಿಧಿಯ ಮೂಲವನ್ನು ಕೋರಿ ಪೋಲಾಕ್ ಮತ್ತು ಅವರ ಕಂಪನಿಯ ವಿರುದ್ಧ ಸಾಲಿಸಿಟರ್ಸ್ ರೆಗ್ಯುಲೇಶನ್ ಅಥಾರಿಟಿ ವಿಚಾರಣೆ ಪ್ರಾರಂಭಿಸುವ ಸಾಧ್ಯತೆ ಇದೆ. ಅದರೊಂದಿಗೆ, ಅವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಯೂ ಇದೆ.