ಹೇಗ್ (ನೆದರ್ಲ್ಯಾಂಡ್):ಹಲವು ವರ್ಷಗಳ ಕಾಲ ಚಿತ್ರಹಿಂಸೆಗೊಳಗಾದ ಉಯಿಘರ್‌ಗಳು ನ್ಯಾಯ ಕೋರಿ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯವನ್ನು (ಐಸಿಸಿ) ಸಂಪರ್ಕಿಸಿದ್ದಾರೆ.
ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಚೀನಾ ಮತ್ತು ಅದರ ಉನ್ನತ ನಾಯಕರ ಕುರಿತು ತನಿಖೆ ನಡೆಸಬೇಕೆಂದು ಒತ್ತಾಯಿಸಿ ಉಯಿಘರ್ ಸಮುದಾಯದ ಪ್ರತಿನಿಧಿಗಳು ಐಸಿಸಿಗೆ ಸಾಕ್ಷ್ಯ ಸಲ್ಲಿಸಿದ್ದಾರೆ.
ಅಪರಾಧಗಳು ಸಾಮೂಹಿಕ ಪ್ರಮಾಣದಲ್ಲಿ ನಡೆದಿವೆ. ಆದ್ದರಿಂದ ಆಪಾದಿತ ಅಪರಾಧಿಗಳ ವಿರುದ್ಧ ಆರೋಪ ಹೊರಿಸಿ ವಿಚಾರಣೆ ನಡೆಸಿ ಎಲ್ಲವನ್ನೂ ತನಿಖೆ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಅಪರಾಧಗಳಿಗೆ ಕಾರಣರಾದ ಉನ್ನತ ನಾಯಕರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಹಿಂದಿನ ಅಧ್ಯಕ್ಷ ಹೂ ಜಿಂಟಾವೊ, ಜಿಂಜಿಯಾಂಗ್ ಪ್ರಾಂತ್ಯದ ಹಲವಾರು ಹಿರಿಯ ಅಧಿಕಾರಿಗಳು ಮತ್ತು ಮಿಲಿಟರಿ ಕಮಾಂಡರ್‌ಗಳು ಸೇರಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.