ಲಂಡನ್: ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ನೆರವಾಗಲು ದೇಣಿಗೆ ಸಂಗ್ರಹಿಸಿ ಬ್ರಿಟನ್ ಪ್ರಜೆಗಳ ಮನಗೆದ್ದಿದ್ದ ಕ್ಯಾಪ್ಟನ್ ಟಾಮ್ ಮೋರ್ ಮಂಗಳವಾರ ಕೋವಿಡ್ 19 ಸೋಂಕಿಗೆ ಬಲಿಯಾಗಿದ್ದಾರೆ.
ಕುಟುಂಬಸ್ಥರು ಟಾಮ್ರ ಅಧಿಕೃತ ಟ್ವಿಟರ್ನಲ್ಲಿ 100ನೇ ವಯಸ್ಸಿಗೆ ಟಾಮ್ ಮೂರ್ ನಿಧನರಾಗಿರುವ ಸುದ್ದಿಯನ್ನು ಪ್ರಕಟಿಸಿದ್ದಾರೆ. 'ಕ್ಯಾಪ್ಟನ್ ಸರ್ ಟಾಮ್ ಮೋರ್ 1920-21' ಎಂದು ಬರೆದು ಅವರು ಫೋಟೋವನ್ನು ಶೇರ್ ಮಾಡಲಾಗಿದೆ.
ಇನ್ನು ಟಾಮ್ ಮೂರ್ ನಿಧನಕ್ಕೆ ಬ್ರಿಟನ್ ರಾಣಿ ಸಂತಾಪ ಸೂಚಿಸಿದ್ದಾರೆ. ರಾಯಲ್ ಫ್ಯಾಮಿಲಿ ಟ್ವಿಟರ್ ಮೂಲಕ ರಾಣಿ ಸಂತಾಪ ಸೂಚಿಸಿದ್ದಾರೆ. " ಕ್ಯಾಪ್ಟನ್ ಸರ್ ಟಾಮ್ ಮತ್ತು ಅವರ ಕುಟುಂಬವನ್ನು ಕಳೆದ ವರ್ಷ ವಿಂಡ್ಸರ್ನಲ್ಲಿ ಭೇಟಿ ಮಾಡಿದ್ದಕ್ಕೆ ಅವರು(ರಾಣಿ) ತುಂಬಾ ಆನಂದಿಸಿದ್ದರು. ಈ ದುಃಖದ ಸಂದರ್ಭದಲ್ಲಿ ಅವರ ಆಲೋಚನೆ ಮತ್ತು ರಾಯಲ್ ಕುಟುಂಬ ಟಾಮ್ ಅವರೊಂದಿಗಿರುತ್ತದೆ" ಎಂದು ಟ್ವಿಟರ್ನಲ್ಲಿ ರಾಣಿ ಎಲಿಜಬತ್ ಹೇಳಿಕೆಯನ್ನು ಶೇರ್ ಮಾಡಲಾಗಿದೆ.