ಸ್ಪೇನ್: ಇಲ್ಲಿನ ಲಾ ಪಾಲ್ಮಾ ದ್ವೀಪದಲ್ಲಿ ಭಾನುವಾರ ಜ್ವಾಲಾಮುಖಿ ಸ್ಫೋಟಗೊಂಡಿದ್ದು ಪರಿಣಾಮ ಲಾವಾರಸ ಪ್ರವಾಹೋಪಾದಿಯಲ್ಲಿ ಹರಿದಿದೆ. ಈ ದುರಂತದಲ್ಲಿ ಈಗಾಗಲೇ ಅನೇಕ ಮನೆಗಳು ಸರ್ವನಾಶಗೊಂಡಿದೆ. ಇದೀಗ ಇಲ್ಲಿನ ಪವಿತ್ರ ಚರ್ಚ್ಗೂ ಲಾವಾರಸ ಅಪ್ಪಳಿಸಿದ್ದು, ಲಾಡಾ ಟೊಡೊಕ್ ಪಟ್ಟಣದ ಜನರಲ್ಲಿ ಭೀತಿ ಎದುರಾಗಿದೆ.
VIDEO.. ಲಾ ಪಾಲ್ಮಾ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟ : ಚರ್ಚ್ಗೂ ನುಗ್ಗಿದ ಲಾವಾರಸ - ಸ್ಪೇನ್
ಲಾವಾರಸ ಚರ್ಚ್ನ ಬೆಲ್ ಟವರ್ಗೆ ಅಪ್ಪಳಿಸಿದ್ದು ದಟ್ಟ ಹೊಗೆ ಆವರಿಸಿರುವ ದೃಶ್ಯ ಮಾಧ್ಯಮಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈಗಾಗಲೇ ಇಲ್ಲಿನ ಅಧಿಕಾರಿಗಳು ಎಚ್ಚೆತ್ತುಕೊಂಡು ಸುಮಾರು 5000ಕ್ಕೂ ಅಧಿಕ ಜನರನ್ನು ಸ್ಥಳಾಂತರ ಮಾಡಿದ್ದಾರೆ.
ಲಾವಾರಸ ಚರ್ಚ್ನ ಬೆಲ್ ಟವರ್ಗೆ ಅಪ್ಪಳಿಸಿದ್ದು ದಟ್ಟ ಹೊಗೆ ಆವರಿಸಿರುವ ದೃಶ್ಯ ಮಾಧ್ಯಮಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈಗಾಗಲೇ ಇಲ್ಲಿನ ಅಧಿಕಾರಿಗಳು ಎಚ್ಚೆತ್ತುಕೊಂಡು ಸುಮಾರು 5000ಕ್ಕೂ ಅಧಿಕ ಜನರನ್ನು ಸ್ಥಳಾಂತರ ಮಾಡಿದ್ದಾರೆ.
ಸುಮಾರು 300 ಅಡಿ ವಿಸ್ತಾರ ಇರುವ ಕುಂಬ್ರೆ ವೈಜಾ ಪರ್ವತ ಶ್ರೇಣಿಯ ಉತ್ತರ ಭಾಗದಿಂದ ಈ ಲಾವಾರಸ ಏಳುತ್ತಿದೆ. ಇತ್ತೀಚೆಗೆ ಜ್ವಾಲಾಮುಖಿಯ ಲಾವಾರಸ ಮನೆಯೊಂದರ ಈಜುಕೊಳಕ್ಕೆ ನುಗ್ಗಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲಾವಾರಸ ಈಜುಕೊಳಕ್ಕೆ ಬೀಳುತ್ತಿದ್ದಂತೆ ವಿಷಕಾರಿ ಅನಿಲ ದುತ್ತೆಂದು ಮೇಲೆ ಎದ್ದ ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿದ್ದಾರೆ.