ಕರ್ನಾಟಕ

karnataka

ETV Bharat / international

ಅಮೆರಿಕ ಬಳಿಕ ರಷ್ಯಾಗೆ ಕೆನಡಾ, ಜಪಾನ್​ ಶಾಕ್: ತನ್ನ ದೇಶಗಳಲ್ಲಿ ರಷ್ಯಾ ಬ್ಯಾಂಕ್​, ಹೂಡಿಕೆಗೆ ನಿರ್ಬಂಧ - ರಷ್ಯಾ ಮೇಲೆ ಜಪಾನ್​, ಕೆನಡಾ ನಿರ್ಬಂಧ ಹೇರಿಕೆ

ಉಕ್ರೇನ್​ ಪ್ರದೇಶಗಳನ್ನು ಆಕ್ರಮಿಸಿಕೊಳ್ಳುತ್ತಿರುವ ರಷ್ಯಾದ ವಿರುದ್ಧ ಅಮೆರಿಕ ಆರ್ಥಿಕ ನಿರ್ಬಂಧಗಳನ್ನು ಹೇರಿದ ಬೆನ್ನಲ್ಲೇ ಕೆನಡಾ ಕೂಡ ಕೆಲವು ನಿರ್ಬಂಧಗಳನ್ನು ವಿಧಿಸಿದೆ.

russia
ಜಸ್ಟಿನ್​ ಟ್ರುಡೋ

By

Published : Feb 23, 2022, 10:00 AM IST

ಜಪಾನ್/ಕೆನಡಾ: ಉಕ್ರೇನ್​ ಪ್ರದೇಶಗಳನ್ನು ಆಕ್ರಮಿಸಿಕೊಂಡಿರುವ ರಷ್ಯಾದ ವಿರುದ್ಧ ಅಮೆರಿಕ ಆರ್ಥಿಕ ನಿರ್ಬಂಧ ಹೇರಿದ ಬೆನ್ನಲ್ಲೇ ಇದೀಗ ಕೆನಡಾ ಮತ್ತು ಜಪಾನ್​ ದೇಶಗಳು ಕೂಡ ಕಠಿಣ ನಿರ್ಬಂಧಗಳನ್ನು ಪ್ರಕಟಿಸಿವೆ.

ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊ ಮಂಗಳವಾರ ರಷ್ಯಾದ ಮೇಲೆ ಆರ್ಥಿಕ ನಿರ್ಬಂಧಗಳನ್ನು ಘೋಷಿಸಿದ್ದಾರೆ. ಇದೇ ವೇಳೆ ರಷ್ಯಾದ ನಡೆಯನ್ನು ಖಂಡಿಸಿರುವ ಅವರು​, ಒಂದು ಸಾರ್ವಭೌಮ ದೇಶದ ಮೇಲೆ ಇಂತಹ ಆಕ್ರಮಣ ಸರಿಯಲ್ಲ. ರಷ್ಯಾದ ಈ ಕ್ರಮ ಸ್ವೀಕಾರಾರ್ಹವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಷ್ಯಾದ ಬ್ಯಾಂಕ್​ಗಳ ವಹಿವಾಟು, ಹಣಕಾಸು ಹೂಡಿಕೆ, ಹಣಕಾಸು ಒಪ್ಪಂದ, ರಷ್ಯಾ ನಿರ್ಮಿತ ವಸ್ತುಗಳ ಖರೀದಿ ತಡೆಯಂತಹ ನಿರ್ಬಂಧಗಳನ್ನು ವಿಧಿಸಿ ಜಸ್ಟಿನ್​ ಟ್ರುಡೋ ಆದೇಶಿಸಿದ್ದಾರೆ.

ಜಪಾನ್​ ನಿರ್ಬಂಧಗಳು:ಇನ್ನು ಜಪಾನ್​ ಕೂಡ ರಷ್ಯಾದ ಮೇಲೆ ಕೆಲ ನಿರ್ಬಂಧಗಳನ್ನು ಹೇರಿದೆ. ಜಪಾನ್​ನಲ್ಲಿ ರಷ್ಯಾ ಬೆಂಬಲಿತ ಬ್ಯಾಂಕ್​ಗಳ ವಹಿವಾಟು ಸ್ಥಗಿತ, ರಷ್ಯಾ ಬಾಂಡ್​ಗಳ ಮಾರಾಟಕ್ಕೆ ನಿಷೇಧ, ರಷ್ಯಾದ ಕೆಲ ವ್ಯಕ್ತಿಗಳ ಆಸ್ತಿಗಳನ್ನು ಸರ್ಕಾರ ತಟಸ್ಥಗೊಳಿಸಿದೆ. ಅಲ್ಲದೇ, ಜಪಾನ್​ಗೆ ರಷ್ಯಾದಿಂದ ಯಾರೂ ಬರಕೂಡದು ಎಂದೂ ಆದೇಶಿಸಿದೆ.

ರಷ್ಯಾದ ಆಕ್ರಮಣ ಉಕ್ರೇನ್‌ನ ಸಾರ್ವಭೌಮತ್ವವನ್ನು ಹಾನಿಗೊಳಿಸುತ್ತದೆ. ಇದು ಅಂತಾರಾಷ್ಟ್ರೀಯ ಬದ್ಧತೆಗೆ ವಿರುದ್ಧವಾಗಿವೆ. ರಾಜತಾಂತ್ರಿಕ ಮಾತುಕತೆಗೆ ರಷ್ಯಾ ಮುಂದಾಗಬೇಕು ಎಂದು ಜಪಾನ್​ ಪ್ರಧಾನಿ ಫುಮಿಯೋ ಕಿಶಿದಾ ಒತ್ತಾಯಿಸಿದ್ದಾರೆ.

ಈ ನಿರ್ಬಂಧಗಳ ಹೊರತಾಗಿಯೂ ರಷ್ಯಾ, ಉಕ್ರೇನ್​ ಮೇಲೆ ಯುದ್ಧ ಸಾರಿದ್ದೇ ಆದಲ್ಲಿ ಇನ್ನೂ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ:'ರಷ್ಯಾದಿಂದ ಉಕ್ರೇನ್ ಮೇಲೆ ಅತಿಕ್ರಮಣ': ಹಲವು ರೀತಿಯ ಆರ್ಥಿಕ ನಿರ್ಬಂಧ ವಿಧಿಸಿದ ಅಮೆರಿಕ

ABOUT THE AUTHOR

...view details