ಕರ್ನಾಟಕ

karnataka

ETV Bharat / international

ಬ್ರಿಟನ್‌ ರಾಣಿಯ ಸ್ಥಾನ ಅಲಂಕರಿಸಲಿದ್ದಾರೆ ರಾಜಕುಮಾರಿ ಕೆಮಿಲಾ: 2ನೇ ಎಲಿಜಬೆತ್‌ ಸಂದೇಶ - Camilla should be Queen says Queen Elizabeth II

ರಾಜಕುಮಾರ ಚಾರ್ಲ್ಸ್‌ ಅವರು ರಾಜನ ಪಟ್ಟಕ್ಕೆ ಏರುತ್ತಿದ್ದಂತೆ ರಾಜಕುಮಾರಿ ಕೆಮಿಲಾ ರಾಣಿಯಾಗಲಿದ್ದಾರೆ ಎಂದು ಬ್ರಿಟನ್‌ನ ರಾಣಿ ಎರಡನೇ ಎಲಿಜಬೆತ್‌ ಘೋಷಿಸಿದ್ದಾರೆ.

Britain Queen Elizabeth II
ಬ್ರಿಟನ್‌ನ ರಾಣಿ ಎರಡನೇ ಎಲಿಜಬೆತ್‌

By

Published : Feb 6, 2022, 9:43 AM IST

ಲಂಡನ್:ವೇಲ್ಸ್‌ನ ರಾಜಕುಮಾರಿ ಹಾಗೂ ಡಚ್ಚಸ್‌ ಆಫ್‌ ಕಾರ್ನ್‌ವಾಲ್‌ ಆಗಿರುವ ಕೆಮಿಲಾ ಅವರು ಬ್ರಿಟನ್‌ನ ರಾಣಿ ಆಗಲಿದ್ದಾರೆ. ರಾಜಕುಮಾರ ಚಾರ್ಲ್ಸ್‌ ಅವರು ರಾಜನ ಪಟ್ಟಕ್ಕೆ ಏರುತ್ತಿದ್ದಂತೆ ರಾಜಕುಮಾರಿ ಕೆಮಿಲಾ ರಾಣಿಯಾಗಲಿದ್ದಾರೆ ಎಂದು ಬ್ರಿಟನ್‌ನ ರಾಣಿ ಎರಡನೇ ಎಲಿಜಬೆತ್‌ ಪ್ರಕಟಿಸಿದ್ದಾರೆ.

ರಾಣಿಯಾಗಿ ಅಧಿಕಾರ ವಹಿಸಿ 70 ವರ್ಷಗಳು ಸಂದಿರುವ (ಪ್ಲಾಟಿನಂ ಜುಬಿಲಿ) ಸಂದರ್ಭದಲ್ಲಿ ಎರಡನೇ ಎಜಿಜಬೆತ್‌ ಅವರು ಕೆಮಿಲಾ ಅವರನ್ನು ರಾಣಿಯಾಗಿ ಘೋಷಿಸಿ ಸಂದೇಶ ನೀಡಿದ್ದಾರೆ. ತಮ್ಮ ಸೊಸೆ ಕೆಮಿಲಾ ಮೇಲೆ ನಿರೀಕ್ಷೆ ವ್ಯಕ್ತಪಡಿಸಿರುವ ಎಲಿಜಬೆತ್‌, ರಾಜಪ್ರಭುತ್ವದ ಭವಿಷ್ಯವನ್ನು ರೂಪಿಸಲು ಚಾರ್ಜ್‌ ರಾಜನಾಗುತ್ತಿದ್ದಂತೆ ಕೆಮಿಲಾ ರಾಣಿಯ ಸ್ಥಾನ ಅಲಂಕರಿಸಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಅಮೆರಿಕದ ಮಿಲ್ವಾಕಿಯಲ್ಲಿ ಶೂಟೌಟ್: ಅಪಾರ್ಟ್​ಮೆಂಟ್​ನಲ್ಲಿ ಇಬ್ಬರನ್ನು ಕೊಂದು, ವ್ಯಕ್ತಿ ಆತ್ಮಹತ್ಯೆ

ಈ ಸಂಬಂಧ ಲಿಖಿತ ಸಂದೇಶ ಪ್ರಕಟಿಸಿರುವ ರಾಣಿ ಎರಡನೇ ಎಲಿಜಬೆತ್‌, 'ನಿಮ್ಮೆಲ್ಲರ ಸಹಕಾರಕ್ಕೆ ನನ್ನ ಧನ್ಯವಾದಗಳು. ನೀವು ತೋರಿರುವ ಪ್ರೀತಿ ಮತ್ತು ನಿಷ್ಠೆಗೆ ಆಭಾರಿಯಾಗಿರುವೆ. ಮುಂದೆ ನನ್ನ ಮಗ ಚಾರ್ಲ್ಸ್‌ ರಾಜನಾದ ನಂತರ, ಅವರು ಮತ್ತು ಅವರ ಪತ್ನಿ ಕೆಮಿಲಾ ಅವರಿಗೆ ನೀವು ಪೂರ್ಣ ಸಹಕಾರ ನೀಡುವ ನಂಬಿಕೆ ಇದೆ. ಹಾಗೆಯೇ ರಾಜ ಕಾರ್ಯಗಳಲ್ಲಿ ನಿರತರಾಗಿರುವ ಕೆಮಿಲಾ ಅವರು ರಾಣಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details