ಕ್ರೊಯೇಷಿಯಾ: ಬಸ್ ಚಲಾಯಿಸುತ್ತಿದ್ದ ವ್ಯಕ್ತಿ ನಿದ್ರೆಗೆ ಜಾರಿದ್ದಕ್ಕೆ ಭೀಕರ ಅಪಘಾತ ಸಂಭವಿಸಿರುವ ಘಟನೆ ಝಾಗ್ರೆಬ್ ಮತ್ತು ಸರ್ಬಿಯನ್ ಗಡಿಯಲ್ಲಿ ನಡೆದಿದೆ. ಘಟನೆಯಲ್ಲಿ 10 ಜನರು ಮೃತಪಟ್ಟಿದ್ದು, ಕನಿಷ್ಠ 44 ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸ್ನಲ್ಲಿ ಮಕ್ಕಳು ಸೇರಿದಂತೆ 67 ಪ್ರಯಾಣಿಕರು ಇದ್ದು, ಅವರೆಲ್ಲರೂ ಜರ್ಮನಿಯ ಫ್ರಾಂಕ್ಫರ್ಟ್ನಿಂದ ಕೊಸಾವೊದ ರಾಜಧಾನಿ ಪ್ರಿಸ್ಟಿನಾಗೆ ಪ್ರವಾಸ ಕೈಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, 8 ಜನರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಎಂದು ಸ್ಲಾವೊನ್ಸ್ಕಿ ಬ್ರಾಡ್ ಆಸ್ಪತ್ರೆಯ ಮುಖ್ಯಸ್ಥ ಜೋಸಿ ಸಮರ್ಡ್ಜಿಕ್ ಮಾಹಿತಿ ನೀಡಿದ್ದಾರೆ.