ಕರ್ನಾಟಕ

karnataka

ETV Bharat / international

ಕೊರೊನಾ ವೈರಸ್: ಬ್ರಿಟಿಷ್  ರ‍್ಯಾಪರ್ ನಿಧನ - ನ್ಯುಮೋನಿಯಾ ಕಾಯಿಲೆ

ಕೊರೊನಾ ವೈರಸ್‌ನಿಂದ ಚೇತರಿಸಿಕೊಳ್ಳುತ್ತಿರುವಾಗ ನ್ಯುಮೋನಿಯಾ ಕಾಯಿಲೆಗೆ ತುತ್ತಾಗಿ ಬ್ರಿಟಿಷ್ ರ‍್ಯಾಪರ್ ಬೆನ್ ಚಿಜಿಯೋಕ್ ನಿಧನರಾಗಿದ್ದಾರೆ.

ben
ben

By

Published : May 8, 2020, 3:40 PM IST

ಲಂಡನ್:ಬ್ರಿಟಿಷ್ ರ‍್ಯಾಪರ್ ಬೆನ್ ಚಿಜಿಯೋಕ್, ಕೊರೊನಾ ವೈರಸ್​ನಿಂದಾಗಿ ಮೃತಪಟ್ಟಿದ್ದಾರೆ. ಅವರಿಗೆ 47 ವರ್ಷ ವಯಸ್ಸಾಗಿತ್ತು.

ವೈರಸ್‌ನಿಂದ ಚೇತರಿಸಿಕೊಳ್ಳುತ್ತಿರುವಾಗ ನ್ಯುಮೋನಿಯಾ ಕಾಯಿಲೆಗೆ ತುತ್ತಾಗಿ ರ್ಯಾಪರ್ ಬೆನ್ ಚಿಜಿಯೋಕ್ ಸಾವನ್ನಪ್ಪಿದ್ದಾರೆ.

ಬ್ರಿಟಿಷ್ ರ್ಯಾಪರ್ ಬೆನ್ ಚಿಜಿಯೋಕ್

ಬೆನ್ ಚಿಜಿಯೋಕ್ ಅವರ ಸ್ಥಿತಿ ಸುಧಾರಿಸುತ್ತಿತ್ತು. ಆದರೆ, ಕಳೆದ ವಾರ ಸಾಮಾನ್ಯ ವಾರ್ಡ್‌ನಲ್ಲಿದ್ದಾಗ ಅವರು ನ್ಯುಮೋನಿಯಾಕ್ಕೆ ತುತ್ತಾಗಿದ್ದರು. ಆದ್ದರಿಂದ ಅವರ ಆರೋಗ್ಯ ಹದಗೆಟ್ಟು, ಚೇತರಿಸಲಾಗದೇ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏಪ್ರಿಲ್ ತಿಂಗಳಲ್ಲಿ ಬೆನ್ ಚಿಜಿಯೋಕ್​ಗೆ ಸೋಂಕು ಬಾಧಿಸಿತ್ತು. ಏಪ್ರಿಲ್ 19ರಂದು ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದರು. ಆದರೆ ಕೊರೊನಾ ವೈರಸ್ ಜೊತೆಗೆ ನ್ಯುಮೋನಿಯಾಕ್ಕೆ ತುತ್ತಾಗಿದ್ದರಿಂದ ರ‍್ಯಾಪರ್ ಬೆನ್ ಚಿಜಿಯೋಕ್ ಮೃತಪಟ್ಟಿದ್ದಾರೆ.

ABOUT THE AUTHOR

...view details