ಕರ್ನಾಟಕ

karnataka

ETV Bharat / international

ಹತೋಟಿಗೆ ಬಾರದ ಕೊರೊನಾ: ಇಂಗ್ಲೆಂಡ್​ನಲ್ಲಿ ಗುರುವಾರದಿಂದ ಕಠಿಣ ಲಾಕ್​ಡೌನ್​ 2! - ಇಂಗ್ಲೆಂಡ್​ನಲ್ಲಿ ಗುರುವಾರದಿಂದ ಕಠಿಣ ಲಾಕ್​ಡೌನ್

ಕೊರೊನಾ ವೈರಸ್ ವಿರುದ್ಧ ಹೋರಾಡುವ ಉದ್ದೇಶದಿಂದ ಲಂಡನ್​ನಲ್ಲಿ ಇದೀಗ ಲಾಕ್​ಡೌನ್​ 2.0 ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.

lockdown across England
lockdown across England

By

Published : Nov 1, 2020, 5:32 AM IST

ಲಂಡನ್​:ಮಹಾಮಾರಿ ಕೊರೊನಾ ವೈರಸ್​ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಇಂಗ್ಲೆಂಡ್​ನಲ್ಲಿ ಡಿಸೆಂಬರ್​​ 2ರವರೆಗೆ ಕಠಿಣ ಲಾಕ್​ಡೌನ್​ ಜಾರಿ ಮಾಡಿ ಮಹತ್ವದ ಆದೇಶ ಹೊರಡಿಸಲಾಗಿದೆ.

ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​ ಇದರ ಬಗ್ಗೆ ಮಾಹಿತಿ ನೀಡಿದ್ದು, ಬರುವ ಗುರುವಾರದಿಂದ ಮುಂದಿನ ಒಂದು ತಿಂಗಳ ಕಾಲ ದೇಶಾದ್ಯಂತ ಲಾಕ್​ಡೌನ್​ 2 ಜಾರಿಗೊಳ್ಳಲಿದೆ. ಲಂಡನ್​ನಲ್ಲಿ ಈಗಾಗಲೇ ಕೋವಿಡ್​ ಕೇಸ್​ 1 ಲಕ್ಷ ಗಡಿ ದಾಟಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ದೇಶದಲ್ಲಿ ಪ್ರತಿದಿನ ಕೋವಿಡ್ ಸಂಖ್ಯೆ ಏರಿಕೆಯಾಗುತ್ತಿರುವ ಕಾರಣ ಡಿಸೆಂಬರ್​ ವೇಳೆಗೆ ಸಾವಿನಲ್ಲಿ ತೀವ್ರತೆ ಕಂಡು ಬರುವ ಸಾಧ್ಯತೆ ಇದೆ.

ಕಠಿಣ ಲಾಕ್​ಡೌನ್​ ಜಾರಿ

  • ದೇಶದಲ್ಲಿ ಅಗತ್ಯ ಆಹಾರ ಪದಾರ್ಥಗಳ ಅಂಗಡಿ ಮಾತ್ರ ತೆರೆಯಲಿದ್ದು, ಉಳಿದಂತೆ ಎಲ್ಲವೂ ಬಂದ್​ ಆಗಲಿದೆ.
  • ವಿಶೇಷವೆಂದರೆ ಶಾಲೆಗಳು, ವಿಶ್ವವಿದ್ಯಾಲಯಗಳು ಹಾಗೂ ಕೋರ್ಟ್​ಗಳು ಕಾರ್ಯ ನಿರ್ವಹಿಸಲಿವೆ.
  • ಚಿಲ್ಲರೆ ವ್ಯಾಪಾರ, ರೆಸ್ಟೋರೆಂಟ್​,ಪಬ್​ಗಳು ಹಾಗೂ ಇತರೆ ಸ್ಥಳಗಳು ಬಂದ್​ ಆಗಲಿವೆ.
  • ಜನರು ತಮ್ಮ ಮನೆಯಿಂದ ಹೊರಬರುವುದು ಸಂಪೂರ್ಣ ನಿಷೇಧ, ವ್ಯಾಪಾರಿಗಳಿಗೆ ನಿರ್ಬಂಧ.

ಈಗಾಗಲೇ ಲಂಡನ್​ನ ಗ್ರೇಟರ್​ ಮ್ಯಾಂಚೆಸ್ಟರ್​, ವೇಲ್ಸ್​​, ದಕ್ಷಿಣ ಯಾರ್ಕ್​ಷೈರ್​​ನಲ್ಲಿ ಕಠಿಣ ಲಾಕ್​ಡೌನ್ ಜಾರಿಯಲ್ಲಿದ್ದು, ಇದೀಗ ಸಂಪೂರ್ಣ ಲಂಡನ್​ನಲ್ಲಿ ಇದನ್ನ ಜಾರಿಗೊಳಿಸಲಾಗಿದೆ.

ABOUT THE AUTHOR

...view details