ಕರ್ನಾಟಕ

karnataka

ETV Bharat / international

ಬ್ರಿಟನ್ ಪ್ರಧಾನಿ ಅಧ್ಯಕ್ಷತೆಯಲ್ಲಿ ಜಿ7 ಸಭೆ: ಆಫ್ಘನ್​ ಜನರ ಪರವಾಗಿ ನಿಲ್ಲುವಂತೆ ಕೇಳುವ ನಿರೀಕ್ಷೆ - ತಾಲಿಬಾನ್​

ಇಂಗ್ಲೆಂಡ್​​ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಜಿ7 ತುರ್ತು ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಈ ವೇಳೆ ಅಫ್ಘಾನಿಸ್ತಾನ ಜನರ ಪರವಾಗಿ ನಿಲ್ಲುವಂತೆ ಜಿ7ನ ಇತರೆ 6 ರಾಷ್ಟ್ರಗಳನ್ನು ಕೇಳಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.

British PM to ask G7 nations to stand by Afghan people
ಬ್ರಿಟನ್ ಪ್ರಧಾನಿ

By

Published : Aug 24, 2021, 4:08 PM IST

ಲಂಡನ್​​: ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿ7 ತುರ್ತು ಸಭೆಯಲ್ಲಿ, ಅವರು ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಯುಎಸ್ ನಾಯಕರನ್ನು ಅಫ್ಘಾನಿಸ್ತಾನದ ಜನರ ಪರವಾಗಿ ನಿಲ್ಲುವಂತೆ ಮತ್ತು ಮಾನವೀಯ ನೆಲೆಗಟ್ಟಿನಲ್ಲಿ ಅಲ್ಲಿನ ನಿರಾಶ್ರಿತರಿಗೆ ನೆರವು ಹಾಗೂ ಬೆಂಬಲವನ್ನು ನೀಡುವಂತೆ ಕೇಳುವ ನಿರೀಕ್ಷೆಯಿದೆ.

ಅಫ್ಘಾನಿಸ್ತಾನವನ್ನು ತಾಲಿಬಾನ್ ತನ್ನ ತೆಕ್ಕೆಗೆ ತೆಗೆದುಕೊಂಡ ಮೇಲೆ ಉಂಟಾಗಿರುವ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಕೊಡುಗೆ ನೀಡಲು ಹಾಗೂ ಮಾನವ ಹಕ್ಕುಗಳನ್ನು ರಕ್ಷಿಸಲು ಯುಕೆ ತನ್ನ ಬದ್ಧತೆಯನ್ನು ಪ್ರದರ್ಶಿಸಲು ಆಫ್ಘನ್​ ನಿರಾಶ್ರಿತರಿಗೆ ಸಹಾಯ ಮಾಡುವಂತೆ ವಿಶ್ವದ ಶ್ರೀಮಂತ ಪ್ರಜಾಪ್ರಭುತ್ವಗಳ ಗುಂಪು ಎನಿಸಿರುವ ಜಿ7ನ ಇತರ ಆರು ಸದಸ್ಯರನ್ನು ಅವರು ಒತ್ತಾಯಿಸುವ ಸಾಧ್ಯತೆಯಿದೆ.

"ನಮ್ಮ ನಾಗರಿಕರು ಮತ್ತು ಕಳೆದ 20 ವರ್ಷಗಳಲ್ಲಿ ನಮ್ಮ ಪ್ರಯತ್ನಗಳಿಗೆ ಸಹಾಯ ಮಾಡಿದ ಆಫ್ಘನ್​ ಜನತೆಯನ್ನು ಸ್ಥಳಾಂತರಿಸುವುದು ನಮ್ಮ ಮೊದಲ ಆದ್ಯತೆ. ನಾವು ಒಂದು ಅಂತಾರಾಷ್ಟ್ರೀಯ ಸಮುದಾಯವಾಗಿ ಒಟ್ಟಾಗಿ ಮತ್ತು ಜಂಟಿ ವಿಧಾನವನ್ನು ಒಪ್ಪಿಕೊಳ್ಳುವುದು ಅತ್ಯಗತ್ಯ. ಅದಕ್ಕಾಗಿಯೇ ತಕ್ಷಣದ ಬಿಕ್ಕಟ್ಟಿಗೆ ನಮ್ಮ ಪ್ರತಿಕ್ರಿಯೆಯನ್ನು ಸಂಘಟಿಸಲು ನಾನು ಜಿ7 ನ ತುರ್ತು ಸಭೆಯನ್ನು ಕರೆದಿದ್ದೇನೆ ಎಂದು ಜಾನ್ಸನ್ ಸಭೆಯ ಮೊದಲು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಡಿಯೋ ಕಾನ್ಫರೆನ್ಸ್​​ ಮೂಲಕ ನಡೆಯಲಿರುವ ಜಿ7 ತುರ್ತು ಸಭೆಯಲ್ಲಿ ವಿಶ್ವಸಂಸ್ಥೆ ಮತ್ತು ನ್ಯಾಟೋ ಪ್ರಧಾನ ಕಾರ್ಯದರ್ಶಿಗಳೂ ಭಾಗವಹಿಸಲಿದ್ದಾರೆ.

ಈ ಮೊದಲು ಪ್ರಧಾನಿ ಜಾನ್ಸನ್ ಅಫ್ಘಾನಿಸ್ತಾನದಲ್ಲಿ ಮಾನವೀಯ ಬಿಕ್ಕಟ್ಟಿನ ಅಪಾಯವನ್ನು ಪರಿಹರಿಸಲು ಐದು ಅಂಶಗಳ ಯೋಜನೆಯನ್ನು ರೂಪಿಸಿದ್ದರು.

  • G7 ರಾಷ್ಟ್ರಗಳು ನೇರ ಹೊಣೆಗಾರಿಕೆಗಳನ್ನು ಹೊಂದಿರುವವರಿಗೆ ತಕ್ಷಣ ಸಹಾಯ ಮಾಡುವುದು
  • ಭಯೋತ್ಪಾದನೆಯಿಂದ, ಯಾವುದೇ ಬೆದರಿಕೆಯಿಂದ ದೇಶಗಳನ್ನು ರಕ್ಷಿಸುವುದು
  • ಮಾನವೀಯ ಮತ್ತು ಅಭಿವೃದ್ಧಿ ನೆರವಿನ ಮೂಲಕ ಈ ಪ್ರದೇಶದಲ್ಲಿ ಆಫ್ಘನ್​ ಜನರನ್ನು ಬೆಂಬಲಿಸುವುದು
  • ಅಗತ್ಯವಿರುವ ಆಫ್ಘನ್ ಜನರನ್ನು ಪುನರ್ವಸತಿ ಮಾಡಲು ಸುರಕ್ಷಿತ ಮತ್ತು ಕಾನೂನು ಮಾರ್ಗಗಳನ್ನು ರಚಿಸುವುದು
  • ಹೊಸ ಆಫ್ಘನ್​ ಆಡಳಿತವನ್ನು ಏಕೀಕೃತ ಮತ್ತು ಸಂಘಟಿತ ರೀತಿಯಲ್ಲಿ ವ್ಯವಹರಿಸಲು ಸ್ಪಷ್ಟವಾದ ಯೋಜನೆ ಅಭಿವೃದ್ಧಿಪಡಿಸುವುದು.

ABOUT THE AUTHOR

...view details