ಲಂಡನ್: ಕೋವಿಡ್ ನಿಮಯ ಉಲ್ಲಂಘಿಸಿ ಕಚೇರಿಯಲ್ಲಿನ ಆಪ್ತಳಿಗೆ ಮುತ್ತು ಕೊಟ್ಟ ಪ್ರಕರಣ ಸಂಬಂಧ ಬ್ರಿಟನ್‌ನ ಆರೋಗ್ಯ ಸಚಿವ ಮ್ಯಾಟ್ ಹ್ಯಾನ್‌ಕಾಕ್ ನಿನ್ನೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಹಿಳಾ ಸಿಬ್ಬಂದಿಗೆ ಮುತ್ತು.. ಕೋವಿಡ್ ಉಲ್ಲಂಘಿಸಿದ ಬ್ರಿಟನ್ ಆರೋಗ್ಯ ಸಚಿವ ಮ್ಯಾಟ್ ರಾಜೀನಾಮೆ - ಆಪ್ತ ಮಹಿಳಾ ಸಿಬ್ಬಂದಿಗೆ ಮುತ್ತು ಕೊಟ್ಟ ಬ್ರಿಟನ್ ಆರೋಗ್ಯ ಸಚಿವ,
ತಮ್ಮ ಕಚೇರಿಯಲ್ಲಿನ ವಿವಾಹಿತ ಆಪ್ತ ಸಿಬ್ಬಂದಿಗೆ ಕೋವಿಡ್ ನಿಯಮ ಉಲ್ಲಂಘಿಸಿ ಮುತ್ತು ಕೊಟ್ಟಿದ್ದ ಬ್ರಿಟನ್ ಆರೋಗ್ಯ ಸಚಿವ ಮ್ಯಾಟ್ ಹ್ಯಾನ್‌ಕಾಕ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಆಪ್ತ ಮಹಿಳಾ ಸಿಬ್ಬಂದಿಗೆ ಮುತ್ತು ಕೊಟ್ಟ ಪ್ರಕರಣ; ಬ್ರಿಟನ್ ಆರೋಗ್ಯ ಸಚಿವ ಸ್ಥಾನಕ್ಕೆ ಮ್ಯಾಟ್ ರಾಜೀನಾಮೆ
ತಮ್ಮ ಕಚೇರಿಯಲ್ಲಿ ವಿವಾಹಿತ ಆಪ್ತ ಸಿಬ್ಬಂದಿವೋರ್ವಳಿಗೆ ಮ್ಯಾಟ್ ಮುತ್ತು ನೀಡಿದ್ದರು. ಲಾಕ್‌ಡೌನ್ ನಿರ್ಬಂಧಗಳನ್ನು ಮೀರಿ ಈ ಕೃತ್ಯ ಎಸಗಿದ್ದಕ್ಕೆ ಅಲ್ಲಿನ ಪ್ರತಿಪಕ್ಷಗಳು ಮ್ಯಾಟ್ ಹ್ಯಾನ್‌ಕಾಕ್ ವಿರುದ್ಧ ವಾಗ್ದಾಳಿ ನಡೆಸಿದ್ದವು.
ಆಪ್ತಳಿಗೆ ಮುತ್ತು ನೀಡಿದ್ದ ಫೋಟೋಗಳನ್ನು ದಸನ್ ಸುದ್ದಿ ಸಂಸ್ಥೆ ಪ್ರಕಟಿಸಿತ್ತು. ಇದು ಭಾರಿ ಚರ್ಚೆಗೆ ಗ್ರಾಸವಾಗಿತ್ತಲ್ಲದೆ, ಕೃತ್ಯವನ್ನು ಹ್ಯಾನ್‌ಕಾಕ್ ಒಪ್ಪಿಕೊಂಡು ಆರೋಗ್ಯ ಸಚಿವ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.