ಲಂಡನ್:ಬ್ರೆಕ್ಸಿಟ್ ವಿವಾದ ನಿಭಾಯಿಸುವಲ್ಲಿ ವಿಫಲವಾಗುತ್ತಿದ್ದೀರಾ? ಎಂದು ಸ್ವಪಕ್ಷೀಯರ ಒತ್ತಡ,ಟೀಕೆ ಹೆಚ್ಚಾಗಿದ್ದರಿಂದ ಬ್ರಿಟನ್ ಪ್ರಧಾನಿ ಥೆರೇಸಾ ಮೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
ಕನ್ಸರ್ವೆಟಿವ್ ಪಕ್ಷದ ನಾಯಕಿಯಾದ ಥೆರೇಸಾ ಮೇ, ಜೂನ್ 7ರಂದು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಬ್ರಿಟನ್ನ ಹಂಗಾಮಿ ಪ್ರಧಾನಿಯಾಗಿ ಅವರು ಮುಂದುವರಿಯಲಿದ್ದಾರೆ.
ಮೇ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಯಾವುದೇ ಚುನಾವಣೆ ನಡೆಯದೆ ಕೆಲವೇ ವಾರಗಳಲ್ಲಿ ಯುಕೆ ಕನ್ಸರ್ವೆಟೀವ್ ಪಕ್ಷದ ಮತ್ತೋರ್ವ ನಾಯಕ ಬ್ರಿಟನ್ ಪ್ರಧಾನಿ ಹುದ್ದೆಗೆ ನೇಮಕ ಆಗಲಿದ್ದಾರೆ.
ಬ್ರೆಕ್ಸಿಟ್ ಪ್ರಕಾರ ಬ್ರಿಟನ್ ಯುರೋಪಿಯನ್ ಒಕ್ಕೂಟದಿಂದ ನಿಗದಿತ ಸಮಯಕ್ಕೆ ಹೊರತರುವಲ್ಲಿ ಸೋತಿದ್ದಾರೆ ಎಂದು ಸ್ವಪಕ್ಷೀಯ ನಾಯಕರ ಅಸಮಾಧಾನಕ್ಕೆ ಮೇ ಗುರಿಯಾಗಿದ್ದರು. ಈ ಒತ್ತಡ ನಿಭಾಯಿಸುವಲ್ಲಿ ಮೇ ವಿಫಲವಾಗಿದ್ದು, ರಾಜೀನಾಮೆ ಕೊಡುವ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.
ಪ್ರಧಾನಿ ಹುದ್ದೆಗೆ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಾಗೂ ಬ್ರೆಕ್ಸಿಟ್ನ ಬಲವಾದ ಸಮರ್ಥಕ ಬೊರಿಸ್ ಜಾನ್ಸನ್ ನೇಮಕವಾಗುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಹೇಳಲಾಗುತ್ತಿದೆ.