ಕರ್ನಾಟಕ

karnataka

ETV Bharat / international

ಪ್ರವಾಹ ಪೀಡಿತ ಅಮೆಜಾನ್​ ಪ್ರದೇಶಕ್ಕೆ ಬ್ರೆಜಿಲ್​​ ಅಧ್ಯಕ್ಷ ಜೈರ್ ಬೋಲ್ಸೊನಾರೊ ಭೇಟಿ - ಬ್ರೆಜಿಲ್​ನ ಅಧ್ಯಕ್ಷ ಜೈರ್ ಬೋಲ್ಸೊನಾರೊ ಭೇಟಿ

ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರು ಬುಧವಾರ ಅಮೆಜಾನ್ ಮಳೆಕಾಡಿನ ಎಕರೆ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ರು. ಪ್ರವಾಹ ಉಂಟಾಗಿ ಸುಮಾರು 120,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ರಾಜ್ಯದ ಅಗ್ನಿಶಾಮಕ ಇಲಾಖೆಯ ಮಾಹಿತಿಯ ಪ್ರಕಾರ, ಫೆಡರಲ್ ಅಧಿಕಾರಿಗಳು ಹತ್ತು ಪುರಸಭೆಗಳಲ್ಲಿ ವಿಪತ್ತು ಸ್ಥಿತಿಯನ್ನು ಘೋಷಿಸಿದ್ದಾರೆ.

Brazils Bolsonaro visits Amazon jungle
ಬ್ರೆಜಿಲ್​​ ಅಧ್ಯಕ್ಷ ಜೈರ್ ಬೋಲ್ಸೊನಾರೊ ಭೇಟಿ

By

Published : Feb 25, 2021, 4:56 PM IST

ರಿಯೊ ಡಿ ಜನೈರೊ:ಅಮೆಜಾನ್​ ಮಳೆ ಕಾಡು ಎಕರೆ ರಾಜ್ಯದಲ್ಲಿ ಪ್ರವಾಹಕ್ಕೆ ತುತ್ತಾಗಿರುವ ನಗರಗಳಿಗೆ ಬ್ರೆಜಿಲ್​ನ ಅಧ್ಯಕ್ಷ ಜೈರ್ ಬೋಲ್ಸೊನಾರೊ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಬ್ರೆಜಿಲ್​​ ಅಧ್ಯಕ್ಷ ಜೈರ್ ಬೋಲ್ಸೊನಾರೊ ಭೇಟಿ

ವಿಪರೀತ ಮಳೆಯಿಂದಾಗಿ ಹಲವಾರು ನದಿಗಳು ಉಕ್ಕಿ ಹರಿದ ಪರಿಣಾಮ ಪ್ರವಾಹ ಉಂಟಾಗಿ ಸುಮಾರು 120,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ರಾಜ್ಯದ ಅಗ್ನಿಶಾಮಕ ಇಲಾಖೆಯ ಮಾಹಿತಿಯ ಪ್ರಕಾರ, ಫೆಡರಲ್ ಅಧಿಕಾರಿಗಳು ಹತ್ತು ಪುರಸಭೆಗಳಲ್ಲಿ ವಿಪತ್ತು ಸ್ಥಿತಿಯನ್ನು ಘೋಷಿಸಿದ್ದಾರೆ.

ಓದಿ:360 ಡಿಗ್ರಿಯಲ್ಲಿ ಮೊದಲ ಹೈ-ಡೆಫಿನಿಷನ್ ಚಿತ್ರ ಕಳುಹಿಸಿದ ಮಾರ್ಸ್​ ರೋವರ್​​

ಸೇನಾ ಮಧುರೈರಾ ಪ್ರದೇಶವೂ ಪ್ರವಾಹಕ್ಕೆ ಹೆಚ್ಚು ತುತ್ತಾಗಿದ್ದು, ಅದರ ಶೇ.70ರಷ್ಟು ಪ್ರದೇಶ ಪ್ರವಾಹದಿಂದ ಮುಳುಗಿದೆ. ಸುಮಾರು 4,000ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆ ಮಾಹಿತಿ ನೀಡಿದೆ.

ಹಲವಾರು ಪುರಸಭೆಗಳಲ್ಲಿ ನೀರಿನ ಮಟ್ಟವು ಬುಧವಾರ ಕಡಿಮೆಯಾಗಿದ್ದು, ಆದ್ರೂ ಈ ವಾರ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ. ಕೋವಿಡ್​-19, ಡೆಂಘಿ ಜ್ವರ, ಪೆರು ದೇಶದೊಂದಿಗೆ ವಲಸೆ ಬಿಕ್ಕಟ್ಟಿನ ನಡುವೆ ಪ್ರವಾಹ ಈ ದೇಶವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

ABOUT THE AUTHOR

...view details