ಬ್ರೆಸಿಲಿಯಾ:ಬ್ರೆಜಿಲ್ನಲ್ಲಿ ಕೋವಿಡ್ ಅಬ್ಬರ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 85,149 ಹೊಸ ಪ್ರಕರಣಗಳು ಹಾಗೂ 2,216 ಸಾವು ವರದಿಯಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ. ಇದೀಗ ರಾಷ್ಟ್ರದ ಒಟ್ಟು ಸೋಂಕಿತರ ಸಂಖ್ಯೆ 1,72,96,118 ಹಾಗೂ ಸಾವಿನ ಸಂಖ್ಯೆ 4,84,235ಕ್ಕೆ ಏರಿಕೆಯಾಗಿದೆ.
ಬ್ರೆಜಿಲ್ನ ಆಸ್ಪತ್ರೆಗಳ 80ರಷ್ಟು ತೀವ್ರ ನಿಗಾ ಘಟಕಗಳು (ಐಸಿಯು) ಕೊರೊನಾ ರೋಗಿಗಳಿಂದ ತುಂಬಿ ಹೋಗಿದೆ. ಅದರಲ್ಲಿಯೂ ಮ್ಯಾಟೊ ಗ್ರೊಸೊ- ಡೊ- ಸುಲ್ ಮತ್ತು ಪರಾನಾ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಶೇ.95ರಷ್ಟು ಐಸಿಯು ಭರ್ತಿಯಾಗಿದ್ದು, ವೈದ್ಯಕೀಯ ವಲಯ ಸಂಕಷ್ಟದಲ್ಲಿ ಸಿಲುಕಿದೆ.