ರಿಯೋ ಡಿ ಜನೈರೋ(ಬ್ರೆಜಿಲ್):ಶಂಕಿತರಗಂಟಲು, ರಕ್ತದ ಮಾದರಿ ಪರೀಕ್ಷೆ ಮತ್ತು ಸೋಂಕಿತರ ಚಿಕಿತ್ಸೆ ವಿಳಂಬವಾಗುತ್ತಿರುವ ಕಾರಣ ಲ್ಯಾಟಿನ್ ಅಮೆರಿಕದಂತೆ ಬ್ರೆಜಿಲ್ ಕೂಡ ಕೊರೊನಾ ಹಾಟ್ಸ್ಪಾಟ್ ಪ್ರದೇಶವಾಗಿ ಮಾರ್ಪಾಡಾಗುತ್ತಿದೆ. ಕೊರೊನಾ ವೈರಸ್ ನಂಜು ಬ್ರೆಜಿಲ್ನಾದ್ಯಂತ ಅಗಾಧವಾಗಿ ಹರಡುತ್ತಿರುವ ಕಾರಣ ಸೋಂಕಿತರು ಮತ್ತು ಮೃತರ ಸಂಖ್ಯೆ ಒಂದೇ ಸಮನೆ ಏರುತ್ತಿವೆ.
ರಿಯೋ ಡಿ ಜನೈರೋದ ಪ್ರಮುಖ 4 ನಗರಗಳಲ್ಲಿ ಆಸ್ಪತ್ರೆಗಳ ವ್ಯವಸ್ಥೆ ಕುಸಿದಿದೆ. ಆ ಆಸ್ಪತ್ರೆಗಳಲ್ಲಿ ಈಗಾಗಲೇ ಎಲ್ಲ ಹಾಸಿಗೆಗಳು ತುಂಬಿವೆ. ಹೊಸದಾಗಿ ಪ್ರಕರಣ ಕಂಡು ಬಂದ ರೋಗಿಗಳನ್ನು ದಾಖಲಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮುಂದಾಗುವ ಅನಾಹುತಗಳ ಕುರಿತು ವೈದ್ಯಕೀಯ ಅಧಿಕಾರಿಗಳು ಎಚ್ಚರಿಸಿದ್ದಾರೆ.
211 ಮಿಲಿಯನ್ ಜನಸಂಖ್ಯೆ ಇರುವ ದೇಶದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವುದು ತುಂಬಾ ವಿಳಂಬವಾಗುತ್ತಿದೆ. ಇದು ಹೀಗೆ ಮುಂದುವರೆದರೆ ಈಗ ಆದ ವರದಿಗಿಂತ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.