ಕರ್ನಾಟಕ

karnataka

ETV Bharat / international

ಬೋರಿಸ್​ ಕ್ಯಾಬಿನೆಟ್​ನಲ್ಲಿ ತ್ರಿವಳಿ ಭಾರತೀಯರು: ಇನ್ಫೊಸಿಸ್​ ಸಂಸ್ಥಾಪಕರ ಅಳಿಯನಿಗೂ ಸ್ಥಾನ! - undefined

ಬ್ರಿಟನ್​​ನ ನೂತನ ಪ್ರಧಾನ ಮಂತ್ರಿಯಾಗಿ ಬೋರಿಸ್ ಜಾನ್ಸನ್ ಗೆಲುವು ಸಾಧಿಸಿದ್ದು, ಅವರ ಕ್ಯಾಬಿನೆಟ್​ನಲ್ಲಿ ಮೂವರು ಭಾರತೀಯರಿಗೆ ಮಣೆ ಹಾಕಲಾಗಿದೆ.

ಖಜಾನೆಯ ಮುಖ್ಯ ಕಾರ್ಯದರ್ಶಿ ರಿಷಿ ಸುನಕ್

By

Published : Jul 25, 2019, 6:07 PM IST

ಹೈದರಾಬಾದ್​/ ಲಂಡನ್​: ಬ್ರಿಟನ್​​ನ ಆಡಳಿತರೂಢ ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕಾಗಿ ಜುಲೈ 23ರಂದು ನಡೆದ ಚುನಾವಣೆಯಲ್ಲಿ ಬೋರಿಸ್ ಜಾನ್ಸನ್ ಗೆಲುವು ಸಾಧಿಸಿ ದೇಶದ ನೂತನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ಇನ್ನು ನೂತನ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಕ್ಯಾಬಿನೆಟ್ ಹುದ್ದೆಗಳಲ್ಲಿ ಮೂವರು ಭಾರತೀಯರಿಗೆ ಮಣೆ ಹಾಕಿದ್ದು, ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್​, ಖಜಾನೆಯ ಮುಖ್ಯ ಕಾರ್ಯದರ್ಶಿ ರಿಷಿ ಸುನಕ್ ಮತ್ತು ಅಂತರರಾಷ್ಟ್ರೀಯ ಅಭಿವೃದ್ಧಿ ರಾಜ್ಯ ಕಾರ್ಯದರ್ಶಿಯಾಗಿ ಅಲೋಕ್ ಶರ್ಮಾರವರನ್ನು ಆಯ್ಕೆ ಮಾಡಿದ್ದಾರೆ.

ರಿಷಿ ಸುನಕ್​ರವರು ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಬರಹಗಾರ ಸುಧಾ ಮೂರ್ತಿ ಅವರ ಅಳಿಯ. ಇವರು 2015ರಲ್ಲಿ ರಿಚ್ಮಂಡ್​ನಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಸುನಕ್​ರವರು ತಮ್ಮ ಶಿಕ್ಷಣವನ್ನು ಆಕ್ಸ್‌ಫರ್ಡ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಗಳಲ್ಲಿ ಪೂರೈಸಿದ್ದಾರೆ.

ಇನ್ನು ಅಲೋಕ್ ಶರ್ಮಾರವರು ರೀಡಿಂಗ್ ವೆಸ್ಟ್​ನಿಂದ 2010ರಲ್ಲಿ ಸಂಸತ್ತಿಗೆ ಆಯ್ಕೆಯಾಗಿ, ಬಳಿಕ 2017ರಲ್ಲಿ ವಸತಿ ಸಚಿವರಾಗಿ ಮತ್ತು 2018 ರಲ್ಲಿ ಉದ್ಯೋಗ ಖಾತೆಯ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಇದಕ್ಕೂ ಮೊದಲು 16 ವರ್ಷಗಳ ಕಾಲ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ್ದರು.

ಭಾರತ ಮತ್ತು ಯುಕೆ ಸಂಬಂಧಗಳನ್ನು ಉಲ್ಲೇಖಿಸಿ ಮಾತನಾಡಿದ ಬೋರಿಸ್​, ನೂತನ ವ್ಯಾಪಾರ ಒಪ್ಪಂದ ಮತ್ತು ವೈಯಕ್ತಿಕ ಸಂಬಂಧವನ್ನು ವೃದ್ಧಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

For All Latest Updates

TAGGED:

ABOUT THE AUTHOR

...view details