ಕರ್ನಾಟಕ

karnataka

ETV Bharat / international

ಪಾಕಿಸ್ತಾನಿ ನಾಗರಿಕರಿಗೆ ಮೂಲ ಹಕ್ಕುಗಳನ್ನು ನೀಡುವುದು ಅತ್ಯವಶ್ಯ: ಬ್ರಿಟಿಷ್ ಪ್ರಧಾನಿ ಒತ್ತಾಯ - ಪ್ರಧಾನಿ ಬೋರಿಸ್ ಜಾನ್ಸನ್

ಲಂಡನ್​​ನಲ್ಲಿ ನಡೆದ ಅಧಿವೇಶನದಲ್ಲಿ ಸಂಸತ್ ಸದಸ್ಯ ಇಮ್ರಾನ್ ಅಹ್ಮದ್ ಖಾನ್ ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರು ಅನುಭವಿಸುತ್ತಿರುವ ಬಗ್ಗೆ ಧನಿ ಎತ್ತಿದ್ದು, ಪ್ರಧಾನಿ ಬೋರಿಸ್ ಜಾನ್ಸನ್ ಸಹ ಪಾಕಿಸ್ತಾನ ತನ್ನ ಪ್ರಜೆಗಳಿಗೆ ಮೂಲ ಹಕ್ಕುಗಳನ್ನು ನೀಡಬೇಕು ಎಂದಿದ್ದಾರೆ.

File Photo
ಸಂಗ್ರಹ ಚಿತ್ರ

By

Published : Nov 12, 2020, 1:57 PM IST

ಲಂಡನ್​(ಇಂಗ್ಲೆಂಡ್​): ಬುಧವಾರ ನಡೆದ ಸಂಸತ್​​ ಅಧಿವೇಶನದಲ್ಲಿ ಪಾಕಿಸ್ತಾನವು ತನ್ನ ನಾಗರಿಕರಿಗೆ ಮೂಲ ಹಕ್ಕುಗಳನ್ನು ನೀಡಬೇಕು ಎಂದು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಒತ್ತಾಯಿಸಿದರು.

ಸಂಸತ್ ಸದಸ್ಯ ಇಮ್ರಾನ್ ಅಹ್ಮದ್ ಖಾನ್ಪಾ, ಕಿಸ್ತಾನದ ಪೇಶಾವರದಲ್ಲಿ ಭಾನುವಾರದಂದು ನಡೆದಿದ್ದ ಅಹ್ಮದಿ ನಾಗರಿಕನ ಹತ್ಯೆ ಬಗ್ಗೆ ಸಂಸತ್​​ನಲ್ಲಿ ಪ್ರಸ್ತಾಪಿಸಿ ಮಾತನಾಡುವ ವೇಳೆ ಈ ಆಗ್ರಹ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ದ್ವೇಷಧ ಬೋಧನೆಗಳನ್ನು ಮಾಡಲಾಗುತ್ತಿದೆ. ಈ ಹಿಂದೆ 82 ವರ್ಷದ ಮಹಬೂಬ್ ಅಹ್ಮದ್ ಖಾನ್ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಇವೆಲ್ಲವೂ ಪಾಕಿಸ್ತಾನದ ಕಾನೂನಿನಡಿಯಲ್ಲಿ ಬರುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ಪಾಕಿಸ್ತಾನವು ಕೋವಿಡ್​-19 ರ ವಿರುದ್ಧ ಹೋರಾಡುವ ಬಗ್ಗೆ ಸರಿಯಾಗಿ ಗಮನಹರಿಸಿದ್ದರೂ ಅದು ಮಾನವೀಯ ಅನ್ಯಾಯಗಳನ್ನು ಮತ್ತು ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರ ದುಃಸ್ಥಿತಿಯನ್ನು ನಿರ್ಲಕ್ಷಿಸಬಾರದು. ಆ ದೇಶದೆಲ್ಲೆಡೆ ಜನರಿಗೆ ನೀಡಲಾಗುತ್ತಿರುವ ಕಿರುಕುಳಗಳನ್ನು ಕಡಿಮೆ ಮಾಡಲೇಬೇಕು ಎಂದು ಇಮ್ರಾನ್ ಅಹ್ಮದ್ ಖಾನ್ ಸಂಸತ್​ ಅಧಿವೇಶನದ ವೇಳೆ ಒತ್ತಾಯಿಸಿದ್ದಾರೆ.

ಅಹ್ಮದ್​ ಖಾನ್​ ಮಾತಿಗೆ ಪ್ರತಿಕ್ರಿಯಿಸಿದ ಪ್ರಧಾನಿ ಬೋರಿಸ್ ಜಾನ್ಸನ್, ನಿಮ್ಮ ಉತ್ಸಾಹದ ಮಾತುಗಳನ್ನು ನಾನು ಒಪ್ಪುತ್ತೇನೆ. ದಕ್ಷಿಣ ಏಷ್ಯಾದ ಸಚಿವರು ಇತ್ತೀಚೆಗೆ ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಅದಲ್ಲದೇ ನಾನು ಸಹ ಪಾಕಿಸ್ತಾನ ಸರ್ಕಾರಕ್ಕೆ ನಿಮ್ಮ ನಾಗರಿಕರಿಗೆ ಮೂಲ ಹಕ್ಕುಗಳನ್ನು ನೀಡಿ ಎಂದು ಒತ್ತಾಯಿಸಿದ್ದೇನೆ ಎಂದು ತಿಳಿಸಿದರು.

ಇನ್ನು ಸಂಸತ್​ ಅಧಿವೇಶನದ ವೇಳೆ ಪಾಕಿಸ್ತಾನದ ಸರ್ಕಾರಿ ಅಧಿಕಾರಿಗಳ ಕೈಯಲ್ಲಿ ಕಿರುಕುಳ ಅನುಭವಿಸುತ್ತಿರುವ ಅಲ್ಪಸಂಖ್ಯಾತರ ರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂಬ ಧನಿ ಕೇಳಿ ಬಂತು.

ABOUT THE AUTHOR

...view details