ಲಂಡನ್(ಇಂಗ್ಲೆಂಡ್) : ಬ್ರಿಟನ್ನ ಆಡಳಿತರೂಢ ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕಾಗಿ ಇಂದು ನಡೆದ ಚುನಾವಣೆಯಲ್ಲಿ ಬ್ರೆಕ್ಸಿಟ್ ಹಾರ್ಡ್‌ಲೈನರ್ ಬೋರಿಸ್ ಜಾನ್ಸನ್ ಗೆದ್ದು, ದೇಶದ ನೂತನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಇಂಗ್ಲೆಂಡ್ನ ನೂತನ ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ಆಯ್ಕೆ
ಬೋರಿಸ್ ಜಾನ್ಸನ್ ಬ್ರಿಟನ್ ದೇಶದ ನೂತನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ನಾಳೆ ಅಂದರೆ ಬುಧವಾರ, ಈಗಿನ ಪ್ರಧಾನಿ ಥೆರೇಸಾ ಮೇ ಸಾಂಪ್ರದಾಯಿಕವಾಗಿ ಬೋರಿಸ್ ಜಾನ್ಸನ್ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ.
ಬ್ರೆಕ್ಸಿಟ್ ಹಾರ್ಡ್‌ಲೈನರ್ ಬೋರಿಸ್ ಜಾನ್ಸನ್
ಪಕ್ಷದ ಸದಸ್ಯರು ಇಂದು ಮತದಾನ ಮಾಡಿದ್ದು, ತಮ್ಮ ಪ್ರತಿಸ್ಪರ್ಧಿ ಜೆರೆಮಿ ಹಂಟ್ ಅವರಿಗಿಂತ ಹೆಚ್ಟಿನ ಮತಗಳ ಅಂತರದಿಂದ ಬೋರಿಸ್ ಜಾನ್ಸನ್ ಗೆಲುವು ಸಾಧಿಸಿದ್ದಾರೆ.
ಈಗಿನ ಪ್ರಧಾನಿ ಥೆರೇಸಾ ಮೇ, ಬುಧವಾರ ಸಾಂಪ್ರದಾಯಿಕವಾಗಿ ಬೋರಿಸ್ ಜಾನ್ಸನ್ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ. ಅಕ್ಟೋಬರ್ 31ರೊಳಗಾಗಿ ಬ್ರಿಟನ್ಅನ್ನು ಐರೋಪ್ಯ ಒಕ್ಕೂಟದಿಂದ ಬೇರ್ಪಡಿಸುವುದಾಗಿ ಅವರು ಭರವಸೆ ನೀಡಿದ್ದಾರೆ.