ಕರ್ನಾಟಕ

karnataka

ETV Bharat / international

ಬೊಲಿವಿಯಾ ಅಧ್ಯಕ್ಷೆ ಜೀನೈನ್​ ಅನೆಜ್​ಗೂ ಕೊರೊನಾ ಸೋಂಕು! - ಜೀನೈನ್​ ಅನೆಜ್

ಪ್ರಪಂಚದಾದ್ಯಂತ ಕೊರೊನಾ ಅಟ್ಟಹಾಸ ಜೋರಾಗಿದ್ದು, ಇದೀಗ ಬೊಲಿವಿಯಾ ಅಧ್ಯಕ್ಷೆಗೂ ಈ ಸೋಂಕು ತಗುಲಿದೆ.

Bolivia President Jeanine
Bolivia President Jeanine

By

Published : Jul 10, 2020, 6:34 AM IST

ಬೊಲಿವಿಯಾ:ಮಧ್ಯಂತರ ಅಧ್ಯಕ್ಷೆ ಜೀನೈನ್​ ಅನೆಜ್ ಚಾವೇಜ್​​​​​​ಗೂ ಕೊರೊನಾ ಸೋಂಕು ತಗುಲಿರುವುದು ಕನ್ಫರ್ಮ್​ ಆಗಿದ್ದು, ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್​​​​​​ನಲ್ಲಿ ಖುದ್ದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ನನಗೆ ಕೊರೊನಾ ಸೋಂಕು ತಗಲಿದ್ದು, ಆರೋಗ್ಯವಾಗಿದ್ದೇನೆ. ಐಸೋಲೇಷನ್​​ನಲ್ಲಿದ್ದು, ಕೆಲಸ ಮಾಡಲಿದ್ದೇನೆ ಎಂದು ಟ್ವೀಟ್​ ಮಾಡಿರುವ 53 ವರ್ಷದ ಅಧ್ಯಕ್ಷೆ ಮುಂದಿನ 14 ದಿನಗಳ ಕಾಲ ಮನೆಯಲ್ಲೇ ಕ್ವಾರಂಟೈನ್​​ಗೊಳಗಾಗಲಿದ್ದಾರೆ.

ಕಳೆದೆರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಅವರನ್ನ ತಪಾಸಣೆ ಮಾಡಿದಾಗ ಕೋವಿಡ್​-19 ಇರುವುದು ಖಚಿತಗೊಂಡಿದೆ. ಬೊವಿಲಿಯಾದಲ್ಲಿ ಕೊರೊನಾ ಲಾಕ್​ಡೌನ್​ ಜಾರಿಯಲ್ಲಿರುವ ಕಾರಣ ಮೇ ತಿಂಗಳಲ್ಲಿ ನಡೆಯಬೇಕಾಗಿರುವ ಚುನಾವಣೆ ಮುಂದೂಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಜೀನೈನ್​ ಅನೆಜ್​ ಹಂಗಾಮಿ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಕ್ಕಟ್ಟಿನ ಸಮಯದಲ್ಲಿ ಅನೆಜ್‌ ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಕುರಿತು ದೇಶದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿವೆ.

ABOUT THE AUTHOR

...view details