ವಾಷಿಂಗ್ಟನ್:ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ವರ್ಚುಯಲ್ ಸಂಭಾಷಣೆ ನಡೆಸಿದರು. ಉಕ್ರೇನ್ - ರಷ್ಯಾ ಯುದ್ಧದ ಹಿನ್ನೆಲೆಯಲ್ಲಿ ಬೈಡನ್ ಚೀನಾ ಅಧ್ಯಕ್ಷರ ಜೊತೆ ಈ ವಿಡಿಯೋ ಕಾಲ್ ಮೂಲಕ ಮಾತುಕತೆ ನಡೆಸಿದರು. ರಷ್ಯಾ ದಾಳಿಗೆ ಉಕ್ರೇನ್ ನಗರಗಳು ಸ್ಮಶಾನವಾಗುತ್ತಿವೆ, ನಾಗರಿಕರು ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗುತ್ತಿದ್ದಾರೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಚೀನಾ ರಷ್ಯಾಕ್ಕೆ ಮಿಲಿಟರಿ ಹಾಗೂ ವಾಣಿಜ್ಯ ಸಂಬಂಧಗಳ ಮೂಲಕ ನೆರವು ನೀಡಿದರೆ ಪರಿಸ್ಥಿತಿ ಇನ್ನೂ ವಿಕೋಪಕ್ಕೆ ಹೋಗಲಿವೆ ಎಂದು ಚೀನಾ ಅಧ್ಯಕ್ಷರಿಗೆ ಬೈಡನ್ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು ಎಂದು ಶ್ವೇತಭವನದ ಮೂಲಗಳು ಹೇಳಿವೆ.
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಬಗ್ಗೆ ಉಭಯ ನಾಯಕರ ನಡುವೆ ಸುಮಾರು ಎರಡು ಗಂಟೆಗಳ ಸುದೀರ್ಘ ಚರ್ಚೆ ನಡೆಯಿತು ಎಂದು ಶ್ವೇತಭವನ ತಿಳಿಸಿದೆ. ಅಧ್ಯಕ್ಷ ಬೈಡನ್ ರಷ್ಯಾದ ಮೇಲೆ ಆರ್ಥಿಕ ದಿಗ್ಬಂಧನ ಹೇರಿರುವ ಬಗ್ಗೆ ವಿವರಣೆ ನೀಡಿದರು. ಉಕ್ರೇನಿಯನ್ ನಗರಗಳು ಮತ್ತು ನಾಗರಿಕರ ವಿರುದ್ಧ ಕ್ರೂರ ದಾಳಿ ನಡೆಸುತ್ತಿರುವ ರಷ್ಯಾಕ್ಕೆ ನೀವು (ಚೀನಾ) ಬೆಂಬಲ ನೀಡಿದಲ್ಲಿ ಹೆಚ್ಚಿನ ಪರಿಣಾಮಗಳು ಉಂಟಾಗಲಿವೆ ಬೈಡನ್ ವಿವರಿಸಿದ್ದಾರೆ.
ಓದಿ:ನೀರಿನ ಟ್ಯಾಂಕ್ ಖಾಲಿ ಮಾಡಿ ಮನೆಗೆ ಬೆಂಕಿಯಿಟ್ಟ ತಂದೆ.. ಮಗ, ಸೊಸೆ, ಮೊಮ್ಮಕ್ಕಳಿಬ್ಬರು ಸುಟ್ಟು ಭಸ್ಮ!