ಲಂಡನ್:ಭಾರತದ ನಗರ, ಅರೆ ನಗರದ ಆಂತರಿಕ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವ್ಯಾಪಿಸಿಕೊಂಡ ಆಟೋ ರಿಕ್ಷಾ ಸೇವೆ ಇಲ್ಲಿನ ಜನಸಾಮಾನ್ಯರ ನಿತ್ಯ ಪಯಾಣದ ಜೀವನಾಡಿಯಾಗಿದ್ದು, ಇಂತಹದೆ ಸೇವೆ ನೀಡಲು ಬಜಾಜ್ ಆಟೋಗಳು ಇಂಗ್ಲಿಂಡ್ನ ರಸ್ತೆಗೆ ಇಳಿದಿವೆ.
ಈಗಾಗಲೇ ಲಿವರ್‌ಪೂಲ್ ಸಿಟಿಯ ನಾಗರಿಕರು ಓಲಾ ಆಟೋ ಸೇವೆಯನ್ನು ಸ್ವಾಗತಿಸಿ, ಬಜಾಜ್ ಆಟೋ ರಿಕ್ಷಾ ಪ್ರಯಾಣಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಸುಲಭ ಪ್ರಯಾಣ ಹಾಗೂ ಕಡಿಮೆ ದರ ಲಿವರ್‌ಪೂಲ್ ನಾಗರಿಕರ ಸಾರಿಗೆ ವ್ಯವಸ್ಥೆಗೆ ಮತ್ತಷ್ಟು ಸುಲಭವಾಗಿಸಿದೆ.
ಪ್ರಯಾಣಿಕರನ್ನು ಸೆಳೆಯಲು ಮೊದಲ ದಿನ ಸಂಪೂರ್ಣ ಉಚಿತ ಸೇವೆ ನೀಡಲಾಗಿತ್ತು. ಪ್ರಥಮ ಬಾರಿಗೆ ಓಲಾ ಆ್ಯಪ್ ಡೌನ್ಲೋಡ್ ಮಾಡಿದ ಗ್ರಾಹಕರಿಗೆ ಶೇ 50ರಷ್ಟು ನೀಡಿದೆ. 2018ರಲ್ಲೇ ಇಂಗ್ಲೆಂಡ್‌ನ ಕಾರ್ಡಿಫ್, ಬ್ರಿಸ್ಟೋಲ್ ಸೇರಿದಂತೆ ಪ್ರಮುಖ ನಾಲ್ಕು ನಗರಗಳಲ್ಲಿ ಓಲಾ ಆಟೋ ಸೇವೆ ಆರಂಭಿಸಿದೆ. ಮುಂದಿನ ದಿನಗಳಲ್ಲಿ ಇಂಗ್ಲೆಂಡ್‌ನ ಉತ್ತರ ಭಾಗಕ್ಕೂ ತನ್ನ ಸೇವೆ ವಿಸ್ತರಿಸುವ ಗುರಿ ಇರಿಸಿಕೊಂಡಿದೆ.
ಇಂಗ್ಲೆಂಡ್‌ನ ಓಲಾ ವ್ಯವಸ್ಥಾಪಕ ನಿರ್ದೇಶಕ ಬೆನ್ ಲಿಗ್ ಮಾತನಾಡಿ, ನಗರದ ನಿವಾಸಿಗಳೊಂದಿಗೆ ಪಯಾಣದ ಸಮಸ್ಯೆಗಳನ್ನು ಅರಿತು ಈ ಆಟೋ ರಿಕ್ಷಾ ಸೇವೆಗೆ ಚಾಲನೆ ನೀಡಿದ್ದೇವೆ. ನಮ್ಮ ಹೊಸ ತಂತ್ರಜ್ಞಾನದ ನೆರವಿನೊಂದಿಗೆ ಸ್ಥಳೀಯರ ಪಯಾಣದ ಸವಾಲುಗಳನ್ನು ನಿವಾರಿಸಲಿದ್ದೇವೆ ಎಂದರು.