ಕರ್ನಾಟಕ

karnataka

ETV Bharat / international

ಕರೋನಾ ದಾಳಿಗೆ ವಿಶ್ವ ತತ್ತರ: ರೋಗ ತಡೆಗೆ ಆಸ್ಟ್ರೇಲಿಯಾ ವಿಜ್ಞಾನಿಗಳಿಂದಲೂ ಸಂಶೋಧನೆ - ಕರೋನಾ ವೈರಸ್

ಕರೋನಾ ವೈರಸ್​​ ಎಂಬ ಮಹಾಮಾರಿ ಜಗತ್ತಿನಾದ್ಯಂತ ಹಬ್ಬುತ್ತಿದ್ದು, ಜನರಲ್ಲಿ ತೀವ್ರ ಆತಂಕ ಸೃಷ್ಠಿಸಿದೆ. ಈ ಹಿನ್ನೆಲೆ ಆಸ್ಟ್ರೇಲಿಯಾದ ಮೆಲ್ಬೋರ್ನ್ ವಿಶ್ವವಿದ್ಯಾಲಯ ಮತ್ತು ರಾಯಲ್ ಮೆಲ್ಬೋರ್ನ್ ಆಸ್ಪತ್ರೆಯ ಸಂಶೋಧಕರು ಈ ವೈರಸ್​​ ತಡೆಗಟ್ಟುವ ನಿಟ್ಟಿನಲ್ಲಿ ಸಂಶೋಧನೆ ನಡೆಸುವತ್ತ ದಾಪುಗಾಲು ಇಟ್ಟಿದ್ದಾರೆ.

corona virus
ಕರೋನಾ ವೈರಸ್

By

Published : Jan 29, 2020, 11:43 AM IST

ಮೆಲ್ಬೋರ್ನ್​: ಜಗತ್ತಿನಾದ್ಯಂತ ಭೀತಿ ಹಬ್ಬಿಸಿರುವ ಕೊರೊನಾ ವೈರಸ್​, ಚೀನಾದಲ್ಲಿ ವ್ಯಾಪಕವಾಗಿ ಉಲ್ಬಣಿಸಿದೆ. ಇಲ್ಲಿಯವರೆಗೆ 130ಕ್ಕೂ ಹೆಚ್ಚು ಜೀವಗಳು ಈ ಮಾರಕ ರೋಗಕ್ಕೆ ಬಲಿಯಾಗಿದ್ದು, ಸಾವಿರಾರು ಜನರಿಗೆ ಈ ಸೋಂಕು ತಗುಲಿದೆ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವಂತಹ ಮಹತ್ವದ ಪ್ರಗತಿಯತ್ತ ಆಸ್ಟ್ರೇಲಿಯಾ ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ.

ಜಾಗತಿಕವಾಗಿ ಈ ವೈರಸ್ ಅನ್ನು ನಿಖರವಾಗಿ ಪತ್ತೆ ಮಾಡಲು ಮತ್ತು ರೋಗನಿರ್ಣಯ ಮಾಡಲು ಅನುವು ಮಾಡಿಕೊಡುವತ್ತ ಮೆಲ್ಬೋರ್ನ್ ವಿಶ್ವವಿದ್ಯಾಲಯ ಮತ್ತು ರಾಯಲ್ ಮೆಲ್ಬೋರ್ನ್ ಆಸ್ಪತ್ರೆಯ ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ.

ಚೀನಾದಲ್ಲಿ ಕೊರೊನಾವೈರಸ್ ಅನುಕ್ರಮವಾಗಿದ್ದು, ಇದು ರೋಗನಿರ್ಣಯಕ್ಕೆ ಸಹಕಾರಿಯಾಗಿದೆ, ನಿಜವಾದ ವೈರಸ್ ಅನ್ನು ಹೊಂದಿರುವ ಪರೀಕ್ಷಾ ವಿಧಾನಗಳನ್ನು ಮೌಲ್ಯೀಕರಿಸುವ ಮತ್ತು ಪರಿಶೀಲಿಸುವ ಸಾಮರ್ಥ್ಯವನ್ನು ನಾವು ಹೊಂದಿದ್ದು, ಅವುಗಳ ಸೂಕ್ಷ್ಮತೆ ಮತ್ತು ನಿರ್ದಿಷ್ಟತೆಗಳನ್ನು ಹೋಲಿಕೆ ಮಾಡಲಾಗುತ್ತದೆ. ಕೋರೋನಾ ವೈರಸ್​​ ಒಂದು ರೋಗನಿರ್ಣಯದ ಗೇಮ್ ಚೇಂಜರ್ ಆಗಿರುತ್ತದೆ ಎಂದು ರಾಯಲ್ ಮೆಲ್ಬೋರ್ನ್ ಆಸ್ಪತ್ರೆಯ ಜೂಲಿಯನ್ ಡ್ರೂಸ್ ತಿಳಿಸಿದ್ದಾರೆ.

ಜನವರಿ 24 ರಂದು ಡೊಹೆರ್ಟಿ ಸಂಸ್ಥೆಯಲ್ಲಿರುವ ರಾಯಲ್ ಮೆಲ್ಬೋರ್ನ್ ಆಸ್ಪತ್ರೆಯ ವಿಕ್ಟೋರಿಯನ್ ಸಾಂಕ್ರಾಮಿಕ ರೋಗಗಳ ಪ್ರಯೋಗಾಲಯಕ್ಕೆ ಆಗಮಿಸಿದ ರೋಗಿಯೋರ್ವನ ರಕ್ತದ ಮಾದರಿಯಿಂದ ಈ ವೈರಸ್​​ನ್ನು ಕಂಡು ಹಿಡಿದು ಈ ಕ್ರಮ ತೆಗೆದುಕೊಳ್ಳಲು ನಾವು ಮುಂದಾಗಿದ್ದೇವೆ ಎಂದು ಸಂಶೋಧಕರು ತಿಳಿಸಿದ್ದಾರೆ.

ABOUT THE AUTHOR

...view details