ಕ್ಯಾನ್‌ಬೆರಾ:ಬಲಿಷ್ಠ ರಾಷ್ಟ್ರ ರಷ್ಯಾದ ಯುದ್ಧ ದಾಳಿಯನ್ನು ದಿಟ್ಟವಾಗಿ ಎದುರಿಸುತ್ತಿರುವ ಉಕ್ರೇನ್ ನೆರವಿಗೆ ಆಸ್ಟ್ರೇಲಿಯಾ ಧಾವಿಸಿದ್ದು, ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುವುದಾಗಿ ತಿಳಿಸಿದೆ.
ಸೋಮವಾರ ಈ ಬಗ್ಗೆ ಆಸ್ಟ್ರೇಲಿಯಾ ಸರ್ಕಾರ ಘೋಷಣೆ ಮಾಡಿದೆ. ಆದರೆ ಯಾವ್ಯಾವ ಶಸ್ತ್ರಾಸ್ತ್ರಗಳನ್ನು ನೀಡಲಿದೆ ಎಂಬುದರ ಮಾಹಿತಿಯನ್ನು ನೀಡಿಲ್ಲ. ಕಳೆದ ಶುಕ್ರವಾರ ಯುದ್ಧಪೀಡಿತ ಉಕ್ರೇನ್ ಬೆಂಬಲಕ್ಕಾಗಿ ನ್ಯಾಟೋ ಟ್ರಸ್ಟ್ ಫಂಡ್‌ಗೆ 3 ಮಿಲಿಯನ್ ಡಾಲರ್ ಆರ್ಥಿಕ ನೆರವು, ಮಿಲಿಟರಿ ಉಪಕರಣಗಳು, ವೈದ್ಯಕೀಯ ಸರಬರಾಜು ಪೂರೈಕೆಯ ಮುಂದುವರಿದ ಭಾಗವಾಗಿ ಈ ನೆರವು ಸಿಗುತ್ತಿದೆ.