ಕರ್ನಾಟಕ

karnataka

By

Published : Jun 4, 2020, 4:50 PM IST

ETV Bharat / international

ಆಸ್ಟ್ರೇಲಿಯಾ - ಇಂಡಿಯಾ  ಶೃಂಗಸಭೆ: ಸಮೋಸಾ - ಖಿಚ್ಡಿಯದ್ದೇ ಮಾತು!

ಮುಂದಿನ ಬಾರಿ ನಾವು ಭೇಟಿಯಾಗುವ ಮೊದಲೇ, ನಾನು ಗುಜರಾತಿ ಖಿಚ್ಡಿಯನ್ನು ಅಡುಗೆ ಮನೆಯಲ್ಲಿ ಸಿದ್ಧಪಡಿಸುತ್ತೇನೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಪ್ರಧಾನಿ ಮೋದಿ ಅವರಿಗೆ ಗುರುವಾರ ನಡೆದ ಸಭೆಯಲ್ಲಿ ಹೇಳಿದ್ದಾರೆ.

ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್​​ ಮಾರಿಸನ್
ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್​​ ಮಾರಿಸನ್

ಮೆಲ್ಬೋರ್ನ್: ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್​​ ಮಾರಿಸನ್​​ ಇಂದು ವಿಡಿಯೋ ಸಂವಾದ ನಡೆಸಿದ್ರು. ಈ ವೇಳೆ ಆಸ್ಟ್ರೇಲಿಯಾ ಪ್ರಧಾನಿ ಗುಜರಾತಿ ಖಿಚ್ಡಿ, ಸಮೋಸಾ ಮತ್ತು ಮಾವಿನ ಚಟ್ನಿಯನ್ನು ತಮ್ಮ ಅಡುಗೆ ಮನೆಯಲ್ಲಿ ತಯಾರಿಸುವುದಾಗಿ ಮೋದಿ ಅವರಿಗೆ ಹೇಳಿದ್ದಾರೆ.

ಕೋವಿಡ್​-19 ಸಾಂಕ್ರಾಮಿಕ ರೋಗದ ನಡುವೆಯೂ ಶೃಂಗಸಭೆಯಲ್ಲಿ ಭಾರತ-ಆಸ್ಟ್ರೇಲಿಯಾದ ಉಭಯ ನಾಯಕರು ಕೆಲವು ವ್ಯವಹಾರಿಕ ಮಾತುಕತೆ ನಡೆಸಿದ್ರು. ಈ ವೇಳೆ, ಗುಜರಾತಿ ಖಿಚ್ಡಿ, ಸಮೋಸಾ ಮತ್ತು ಮಾವಿನ ಚಟ್ನಿ ಮಾತುಕತೆ ತುಂಬಾ ಸ್ವಾರಸ್ಯಕರವಾಗಿತ್ತು.

"ಸಮೋಸಾ ನೀಡಿದ್ದಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ವಾರಾಂತ್ಯದಲ್ಲಿ ಸಮೋಸಾದೊಂದಿಗೆ ನಾವು ತುಂಬಾ ಎಂಜಾಯ್​ ಮಾಡುತ್ತೇವೆ" ಎಂದು ಮಾರಿಸನ್ ಹೇಳಿದರು. ಮುಂದಿನ ಬಾರಿ ನಾವು ಭೇಟಿಯಾಗುವ ಮೋದಲೇ ಗುಜರಾತಿ ಖಿಚ್ಡಿ ತಯಾರಿಸುವುದಾಗಿ ಸ್ಕಾಟ್​​ ಮಾರಿಸನ್​​ ಹೇಳಿದ್ರು.

ಮಾರಿಸನ್‌ಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, "ನಿಮ್ಮ ಸಮೋಸಾಗಳು ಭಾರತದಲ್ಲಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿವೆ. ನೀವು ಖಿಚ್ಡಿ ಬಗ್ಗೆ ಮಾತನಾಡಿರುವುದನ್ನು ತಿಳಿದ ಗುಜರಾತಿ ಜನರು ತುಂಬಾ ಸಂತೋಷಪಟ್ಟರು. ಆಸ್ಟ್ರೇಲಿಯಾದಲ್ಲಿ ಹಲವಾರು ಗುಜರಾತಿಗಳು ನೆಲೆಸಿದ್ದಾರೆ. ಆದಾಗ್ಯೂ, ಖಿಚ್ಡಿ ದೇಶದಾದ್ಯಂತ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಒಂದು ಸಾಮಾನ್ಯ ಪಾಕವಾಗಿದೆ ಎಂದರು"

ABOUT THE AUTHOR

...view details