ಕ್ಯಾನ್ಬೆರಾ: ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಮಾವಿನ ಚಟ್ನಿಯೊಂದಿಗೆ ಸಸ್ಯಾಹಾರಿ 'ಸಮೋಸಾ'ಗಳನ್ನು ತಯಾರಿಸಿದ್ದಾರೆ. ಅಷ್ಟೇ ಅಲ್ಲ, ಇವುಗಳನ್ನು ಪ್ರಧಾನಿ ಮೋದಿ ಜೊತೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ ಎಂದು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸ್ಕಾಟ್ ಮಾರಿಸನ್, ‘ಮಾವಿನ ಚಟ್ನಿಯೊಂದಿಗೆ ಬಿಸಿಬಿಸಿ ಸಮೋಸಾಗಳನ್ನು ತಯಾರಿಸಲಾಗಿದೆ. ಇವುಗಳನ್ನು ಭಾರತದ ಪ್ರಧಾನಿ ಮೋದಿ ಅವರೊಂದಿಗೆ ಶೇರ್ ಮಾಡಲು ಬಯಸುತ್ತೇನೆ. ಅವರು ಸಸ್ಯಾಹಾರಿ. ಅದಕ್ಕಾಗಿ ನಾನು ಅವರೊಂದಿಗೆ ಸಮೋಸಾ ಹಂಚಿಕೊಳ್ಳಲು ಇಷ್ಟಪಡುತ್ತೇನೆ ಎಂದಿದ್ದಾರೆ.