ಕೀವ್:ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ ದಾಳಿ ನಡೆಸಿದೆ. ಇಂದು ಬೆಳಿಗ್ಗೆ ಕೀವ್ನ ಕಟ್ಟಡವೊಂದರ ಮೇಲೆ ರಷ್ಯಾ ನಡೆಸಿದ ದಾಳಿಯಿಂದ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ ದಾಳಿ.. ಇಬ್ಬರ ಸಾವು, ಮೂವರಿಗೆ ಗಾಯ
ಕೀವ್ ನಗರದ ಜನವಸತಿ ಪ್ರದೇಶದಲ್ಲಿರುವ ಕಟ್ಟಡವೊಂದರ ಮೇಲೆ ರಷ್ಯಾದ ಗುಂಡಿನ ದಾಳಿ ಮಾಡಿದ ಪರಿಣಾಮ ಓರ್ವ ಮೃತಪಟ್ಟಿದ್ದಾರೆ.
Ukraine Russia war
ಕಳೆದ 19 ಗಳಿಂದ ರಷ್ಯಾ ದಾಳಿ ಮುಂದುವರಿದಿದ್ದು, ಸಾವು-ನೋವುಗಳು ಹೆಚ್ಚುತ್ತಿವೆ. ಉಕ್ರೇನ್ನ ಗೃಹಸಚಿವರ ಸಲಹೆಗಾರ ಆಂಟನ್ ಗೆರೆಸೆಂಕೋ ಈ ಬಗ್ಗೆ ಮಾಹಿತಿ ನೀಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ರಷ್ಯಾ ಉಕ್ರೇನ್ನ ಎಲ್ಲ ದೊಡ್ಡ ದೊಡ್ಡ ನಗರಗಳನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರೆಸಿದೆ. ಲಿವಿವ್ ಮೇಲೂ ದಾಳಿ ನಡೆಸಿದೆ.
ರಾಜಧಾನಿ ಕೀವ್ ವಶಪಡಿಸಿಕೊಳ್ಳಲು ಬಹುದಿನಗಳಿಂದ ಗುರಿಯಿಟ್ಟಿರುವ ರಷ್ಯಾ ಇದೀಗ ಉಕ್ರೇನ್ನ ರಾಜಧಾನಿಯನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರೆಸಿದೆ.