ಕರ್ನಾಟಕ

karnataka

ETV Bharat / international

ಲಂಡನ್​ನಲ್ಲಿ ಲಾಕ್‌ಡೌನ್ ವಿರೋಧಿ ಪ್ರತಿಭಟನೆ: 33 ಜನರ ಬಂಧನ - ಲಂಡನ್​ ಸುದ್ದಿ

ಲಂಡನ್​ನಲ್ಲಿ ಲಾಕ್‌ಡೌನ್ ವಿರೋಧಿ ಪ್ರತಿಭಟನೆ ನಡೆಸಿ ಕೊರೊನಾ ಮುಂಜಾಗ್ರತಾ ನಿಯಮ ಉಲ್ಲಂಘಿಸಿದ 33 ಜನರನ್ನು ಪೊಲೀಸರು ಬಂಧಿಸಿದ್ದಾರೆ.

London
ಲಂಡನ್​

By

Published : Mar 21, 2021, 7:42 AM IST

ಲಂಡನ್:ಇಲ್ಲಿ ಶನಿವಾರದಂದು ನಡೆದ ಲಾಕ್‌ಡೌನ್ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕನಿಷ್ಠ 33 ಜನರನ್ನು ಬಂಧಿಸಲಾಗಿದೆ. ಹೆಚ್ಚಿನ ಜನರು ಹೈಡ್ ಪಾರ್ಕ್‌ನಲ್ಲಿ ಜಮಾಯಿಸಿ ವೈಟ್‌ಹಾಲ್ ರಸ್ತೆ ಮತ್ತು ಯುಕೆ ಸಂಸತ್ತಿನಲ್ಲಿರುವ ಸರ್ಕಾರಿ ಕಟ್ಟಡಗಳ ಕಡೆಗೆ ಮೆರವಣಿಗೆ ನಡೆಸಿದರು.

ಪ್ರತಿಭಟನೆ ವೇಳೆ ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಮಧ್ಯ ಲಂಡನ್​ನಲ್ಲಿ ಪೊಲೀಸ್​ ಪಡೆಗಳು 33 ಜನರನ್ನು ಬಂಧಿಸಿವೆ ಎಂದು ಮೆಟ್ರೋಪಾಲಿಟನ್ ಪೊಲೀಸರು ಟ್ವೀಟ್ ಮಾಡಿದ್ದಾರೆ.

"ಜನಸಂದಣಿಯಲ್ಲಿ ಸೇರುವವರನ್ನು ಚದುರಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಅಗತ್ಯವಿರುವಲ್ಲಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಾರೆ." ಎಂದು ತಿಳಿಸಿದ್ದಾರೆ.

ಪ್ರತಿಭಟನೆಗಳ ಮೇಲಿನ ಸಾಂಕ್ರಾಮಿಕ-ಸಂಬಂಧಿತ ನಿಷೇಧವನ್ನು ತೆಗೆದುಹಾಕುವಂತೆ ಸಂಸತ್ತಿನ 60 ಕ್ಕೂ ಹೆಚ್ಚು ಸದಸ್ಯರು ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ. ಇಲ್ಲಿಯವರೆಗೆ 43,04,839 ಕೊರೊನಾ ಪ್ರಕರಣಗಳು ಮತ್ತು 1,26,359 ಸಾವುನೋವುಗಳು ವರದಿಯಾಗಿವೆ.

ABOUT THE AUTHOR

...view details