ರಿಯೋ ಡಿ ಜನೈರೊ: ಬ್ರೆಜಿಲ್ನ ಸಾವೊ ಪಾಲೊ ಎಂಬ ರಾಜ್ಯದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 19 ಬಗೆಯ ಕೋವಿಡ್-19 ರೂಪಾಂತರಗಳು ಪತ್ತೆಯಾಗಿವೆ ಎಂದು ಅಲ್ಲಿನ ಜೈವಿಕ ಸಂಶೋಧನಾ ಕೇಂದ್ರವಾದ ಇನ್ಸ್ಟಿಟ್ಯೂಟೊ ಬುಟಾಂಟನ್ ಮಾಹಿತಿ ನೀಡಿದೆ. ಈ ರಾಜ್ಯದ ಒಟ್ಟು ಕೊರೊನಾ ಪ್ರಕರಣಗಳ ಪೈಕಿ ಶೇ. 89.9 ರಷ್ಟು ಕೇಸ್ಗಳು P.1 (ಅಮೇಜಾನಿಯನ್) ತಳಿ ಆಗಿವೆ.
ಕೋವಿಡ್ ಪ್ರಕರಣಗಳ ಪೈಕಿ ಪ್ರಪಂಚದಲ್ಲೇ ಮೂರನೇ ಸ್ಥಾನ ಹಾಗೂ ಮೃತರ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್ನಲ್ಲಿ ಈವರೆಗೆ 1.75 ಕೋಟಿ ಜನರಿಗೆ ವೈರಸ್ ಅಂಟಿದ್ದರೆ, 4.91 ಲಕ್ಷ ಮಂದಿ ಅಸು ನೀಗಿದ್ದಾರೆ. ದಿನನಿತ್ಯ ಲಕ್ಷ ಸನಿಹ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಸಾವೊ ಪಾಲೊ ರಾಜ್ಯದ್ದು ಪ್ರಮುಖ ಪಾಲಿದೆ.