ಕರ್ನಾಟಕ

karnataka

ETV Bharat / international

ಶುಕ್ರ ಗ್ರಹದಲ್ಲಿ ಜೀವಿಗಳಿರುವ ಸಾಧ್ಯತೆ... ಸುಳಿವು ನೀಡಿದ ಮೋಡಗಳು! - ಶುಕ್ರ ಗ್ರಹದಲ್ಲಿ ಜೀವಿಗಳು

ಶುಕ್ರ ಗ್ರಹದ ಮೋಡಗಳಲ್ಲಿ ವಿಲಕ್ಷಣ ಸೂಕ್ಷ್ಮಜೀವಿಗಳು ಇರಬಹುದು ಎಂಬ ಸುಳಿವು ದೊರೆತಿದೆ. ಹವಾಯಿ ಮತ್ತು ಚಿಲಿಯ ಎರಡು ದೂರದರ್ಶಕಗಳು ಶುಕ್ರ ಗ್ರಹದ ದಟ್ಟವಾದ ಮೋಡಗಳಲ್ಲಿ ರಾಸಾಯನಿಕಗಳನ್ನು ಗುರುತಿಸಿದ್ದು, ಇದು ಜೀವಿಗಳಿಗೆ ಮಾತ್ರ ಸಂಬಂಧಿಸಿರುವ ಅನಿಲವಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ.

venus
venus

By

Published : Sep 15, 2020, 1:22 PM IST

ವೇಲ್ಸ್ (ಯು.ಕೆ):ಖಗೋಳಶಾಸ್ತ್ರಜ್ಞರು ಶುಕ್ರ ಗ್ರಹದ ವಾತಾವರಣದಲ್ಲಿ ಜೀವಿಗಳಿರುವ ಸಂಭಾವ್ಯತೆಯನ್ನು ಕಂಡುಕೊಂಡಿದ್ದಾರೆ. ಶುಕ್ರ ಗ್ರಹದ ಸಲ್ಫ್ಯೂರಿಕ್ ಆಸಿಡ್ ತುಂಬಿದ ಮೋಡಗಳಲ್ಲಿ ವಿಲಕ್ಷಣ ಸೂಕ್ಷ್ಮಜೀವಿಗಳು ಇರಬಹುದು ಎಂಬ ಸುಳಿವು ದೊರೆತಿದೆ.

ಹವಾಯಿ ಮತ್ತು ಚಿಲಿಯ ಎರಡು ದೂರದರ್ಶಕಗಳು ಶುಕ್ರ ಗ್ರಹದ ದಟ್ಟವಾದ ಮೋಡಗಳಲ್ಲಿ ರಾಸಾಯನಿಕಗಳನ್ನು ಗುರುತಿಸಿದ್ದು, ಇದು ಜೀವಿಗಳಿಗೆ ಮಾತ್ರ ಸಂಬಂಧಿಸಿರುವ ಒಂದು ವಿಷಕಾರಿ ಅನಿಲ ಎಂದು ಜರ್ನಲ್ ನೇಚರ್ ಖಗೋಳ ವಿಜ್ಞಾನದ ಅಧ್ಯಯನವೊಂದು ತಿಳಿಸಿದೆ.

ಹಲವಾರು ಹೊರಗಿನ ತಜ್ಞರು ಮತ್ತು ಅಧ್ಯಯನ ಲೇಖಕರು ಇದನ್ನು ಒಪ್ಪಿಕೊಂಡಿದ್ದು, ಆದರೆ ಇದು ಶುಕ್ರ ಗ್ರಹದಲ್ಲಿ ಜೀವಿಗಳಿವೆ ಎಂದು ಸಾಬೀತುಪಡಿಸಲು ಬಲವಾದ ಪುರಾವೆಯಾಗುವುದಿಲ್ಲ ಎಂದು ಹೇಳಿದ್ದಾರೆ.

1967ರಲ್ಲಿ ಶುಕ್ರ ಗ್ರಹದ ಮೋಡಗಳಲ್ಲಿ ಜೀವಿಗಳಿರುವ ಸಾಧ್ಯತೆಯ ಕುರಿತು ದಿವಂಗತ ಕಾರ್ಲ್ ಸಗಾನ್ ಅಧ್ಯಯನ ನಡೆಸಿದ್ದರು. ಬಳಿಕ ಅವರು "ಅಸಾಧಾರಣ ಹೇಳಿಕೆಗಳಿಗೆ ಅಸಾಧಾರಣ ಪುರಾವೆಗಳು ಬೇಕಾಗುತ್ತವೆ" ಎಂಬ ಮಾನದಂಡವನ್ನು ಕೂಡ ಸ್ಥಾಪಿಸಿದ್ದರು. ಆದರೆ ಈಗ ದೊರೆತಿರುವ ಸುಳಿವು ಆ ಮಾನದಂಡಗಳನ್ನು ಪೂರೈಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ABOUT THE AUTHOR

...view details