ಕರ್ನಾಟಕ

karnataka

ETV Bharat / international

ಕೋವಿಡ್​ ತಡೆಗಟ್ಟುವಲ್ಲಿ ಅಸ್ಟ್ರಾಜೆನೆಕಾ ಲಸಿಕೆ ಶೇ. 70% ರಷ್ಟು ಪರಿಣಾಮಕಾರಿ - ಬ್ರಿಟಿಷ್‌ ಔಷಧ ತಯಾರಿಕ ಸಂಸ್ಥೆ ಅಸ್ಟ್ರಾಜೆನೆಕಾ

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಔಷದ ತಯಾರಿಕ ಸಂಸ್ಥೆ ಅಸ್ಟ್ರಾಜೆನೆಕಾ ಅಭಿವೃದ್ಧಿ ಪಡಿಸಿರುವ ಕೋವಿಡ್‌-19 ಲಸಿಕೆಯ ವರದಿಯನ್ನು ಸೋಮವಾರ ಬಹಿರಂಗಪಡಿಸಿದೆ. ಕೊರೊನಾ ವೈರಸ್‌ ಅನ್ನು ತಡೆಗಟ್ಟುವಲ್ಲಿ ಈ ಲಸಿಕೆ ಶೇಕಡ 70 ರಷ್ಟು ಪರಿಣಾಮಕಾರಿಯಾಗಿದೆ ಎಂದು ಅಸ್ಟ್ರಾಜೆನೆಕಾ ತಿಳಿಸಿದೆ..

COVID-19 vaccine
ಅಸ್ಟ್ರಾಜೆನೆಕಾ ಲಸಿಕೆ 70% ದಷ್ಟು ಪರಿಣಾಮಕಾರಿ

By

Published : Nov 23, 2020, 7:05 PM IST

ಲಂಡನ್: ಬ್ರಿಟಿಷ್‌ ಔಷಧ ತಯಾರಿಕೆ ಸಂಸ್ಥೆ "ಅಸ್ಟ್ರಾಜೆನೆಕಾ" ತನ್ನ COVID-19 ಲಸಿಕೆಯ ಕೊನೆಯ ಹಂತದ ಪ್ರಯೋಗಗಳು ರೋಗವನ್ನು ತಡೆಗಟ್ಟುವಲ್ಲಿ ಹೆಚ್ಚು ಪರಿಣಾಮಕಾರಿ ಎಂದು ಹೇಳಿದೆ.

ಒಂದು ತಿಂಗಳ ಅಂತರದಲ್ಲಿ ನೀಡಲಾದ ಲಸಿಕೆಯ ಒಂದು ಡೋಸ್‌ (ಎರಡು ಬಾರಿ) ಶೇ.90ರಷ್ಟು ಪರಿಣಾಮಕಾರಿ ಫಲಿತಾಂಶ ನೀಡಿದೆ. ಫಲಿತಾಂಶಗಳ ಬಗ್ಗೆ ವಿಜ್ಞಾನಿಗಳಲ್ಲಿ ಸಂತಸ ವ್ಯಕ್ತವಾಗಿದೆ ಎಂದು ಪ್ರಮುಖ ಸಂಶೋಧಕ ಡಾ. ಆಂಡ್ರ್ಯೂ ಪೊಲಾರ್ಡ್ ಹೇಳಿದರು.

ಈ ಸಂಶೋಧನೆಯಿಂದ ತಯಾರಾಗಿರುವ ಲಸಿಕೆ ತುಂಬಾ ಪರಿಣಾಮಕಾರಿಯಾಗಿದೆ. ಅನೇಕ ಜೀವಗಳನ್ನು ಉಳಿಸಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

ಕೋವಿಡ್​ ಲಸಿಕೆ ತಯಾರಿಕೆಯಲ್ಲಿ ಮುಂಚೂಣಿಯಲ್ಲಿ ಅಮೆರಿಕಾದ ಔಷಧಿ ತಯಾರಿಕಾ ಸಂಸ್ಥೆಗಳಾದ ಫಿಜರ್ ಮತ್ತು ಮೊಡೆರ್ನಾ ಕಳೆದ ವಾರ ಕೊನೆಯ ಹಂತದ ಪ್ರಯೋಗಗಳ ಪ್ರಾಥಮಿಕ ಫಲಿತಾಂಶಗಳನ್ನು ವರದಿ ಮಾಡಿವೆ. ಅವರ COVID-19 ಲಸಿಕೆಗಳು ಸುಮಾರು ಶೇ. 95 ಪ್ರತಿಶತ ಪರಿಣಾಮಕಾರಿ ಎಂದು ಹೇಳಿಕೊಂಡಿವೆ.

ABOUT THE AUTHOR

...view details