ಬಾಕು(ಅಜೆರ್ಬೈಜಾನ್): ಅರ್ಮೇನಿಯಾ ಮತ್ತು ಅಜೆರ್ಬೈಜಾನ್ನಲ್ಲಿ ನಡೆಯುತ್ತಿದ್ದ ಸಂಘರ್ಷವನ್ನ ನಿಲ್ಲಿಸುವ ಕುರಿತಂತೆ ಎರಡೂ ಬಣಗಳು ಕದನ ವಿರಾಮ ಘೋಷಿಸಿಕೊಂಡಿವೆ.
ಕದನ ವಿರಾಮ ಘೋಷಿಸಿದ ಅರ್ಮೇನಿಯಾ-ಅಜೆರ್ಬೈಜಾನ್ - ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋ
1994 ರಲ್ಲಿ ಯುದ್ಧ ಮುಗಿದಾಗಿನಿಂದ ಅರ್ಮೇನಿಯಾ ಬೆಂಬಲಿತ ಅರ್ಮೇನಿಯನ್ ಪಡೆಗಳ ನಿಯಂತ್ರಣದಲ್ಲಿದೆ. ಸೆಪ್ಟೆಂಬರ್ 27 ರಿಂದ ಪ್ರಾರಂಭವಾದ ಘರ್ಷಣೆಯಲ್ಲಿ ಸಾಕಷ್ಟು ಸಾವು ನೋವುಗಳು ಸಂಭವಿಸಿದ್ದು, ಇದು ಭಾರಿ ಹಿಂಸಾಚಾರಕ್ಕೆ ಕಾರಣವಾಗಿತ್ತು.
ಈ ಸಂಬಂಧ ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ವಿದೇಶಾಂಗ ಸಚಿವರುಗಳೊಂದಿಗೆ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋ ನಡೆಸಿದ ದೂರವಾಣಿ ಸಂಭಾಷಣೆ ವೇಳೆ ಈ ಹೊಸ ಒಪ್ಪಂದವನ್ನ ಘೋಷಣೆ ಮಾಡಲಾಗಿದೆ. ಈ ವೇಳೆ ರಷ್ಯಾ ವಿದೇಶಾಂಗ ಸಚಿವರು ಎರಡೂ ರಾಷ್ಟ್ರಗಳಿಗೆ ಮಾಸ್ಕೋ ಒಪ್ಪಂದವನ್ನ ಪಾಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಾಗೋರ್ನೊ - ಕರಾಬಖ್ ಅಜೆರ್ಬೈಜಾನ್‌ನಲ್ಲಿದೆ. ಆದರೆ, 1994 ರಲ್ಲಿ ಯುದ್ಧ ಮುಗಿದಾಗಿನಿಂದ ಅರ್ಮೇನಿಯಾ ಬೆಂಬಲಿತ ಅರ್ಮೇನಿಯನ್ ಪಡೆಗಳ ನಿಯಂತ್ರಣದಲ್ಲಿದೆ. ಸೆಪ್ಟೆಂಬರ್ 27 ರಿಂದ ಪ್ರಾರಂಭವಾದ ಘರ್ಷಣೆಯಲ್ಲಿ ಸಾಕಷ್ಟು ಸಾವು ನೋವುಗಳು ಸಂಭವಿಸಿದ್ದು, ಭಾರಿ ಹಿಂಸಾಚಾರಕ್ಕೆ ಕಾರಣವಾಗಿತ್ತು. ಈ ಹೋರಾಟದಲ್ಲಿ ನೂರಾರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.